ETV Bharat / city

ಯಾವುದೇ ಅನುಮಾನ ಬೇಡ, ಅನರ್ಹ ಶಾಸಕರು ಅರ್ಹರಾಗುತ್ತಾರೆ.. ಸಚಿವ ಪ್ರಹ್ಲಾದ್‌ ಜೋಶಿ - Supreme Court

ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನಡೆಸಲಿದ್ದು,‌ ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸುವಂತಹ ಕೆಲಸ ನಡೆದಿದೆ.‌ ಜೆಡಿಎಸ್-ಕಾಂಗ್ರೆಸ್ ಮುಳುಗುತ್ತಿರುವ ಹಡಗುಗಳು. ಮುಳುಗುತ್ತಿರುವ ಹಡಗಿನಲ್ಲಿ ಹೋಗಿ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ. ಅನರ್ಹ ಶಾಸಕರುಗಳು ಅರ್ಹ ಶಾಸಕರಾಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭವಿಷ್ಯ ನುಡಿದಿದ್ದಾರೆ.

ಜನರ ಸಮಸ್ಯೆಗಳನ್ನು ಆಲಿಸಿದ ಪ್ರಲ್ಹಾದ್ ಜೋಶಿ
author img

By

Published : Aug 24, 2019, 2:22 PM IST

ಹುಬ್ಬಳ್ಳಿ: ಅನರ್ಹ ಶಾಸಕರುಗಳು ಅರ್ಹ ಶಾಸಕರಾಗುತ್ತಾರೆ. ಸುಪ್ರೀಂಕೋರ್ಟ್​ನಲ್ಲಿ ಅವರಿಗೆ ಜಯ ಸಿಗುತ್ತದೆ. ನಾಲ್ಕು ವರ್ಷಗಳ ಕಾಲ ಬಿಜೆಪಿ ಸಂಪೂರ್ಣವಾಗಿ ಆಡಳಿತ ನಡೆಸುತ್ತದೆ. ಯಾವುದೇ ಅನುಮಾನ ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭವಿಷ್ಯ ನುಡಿದಿದ್ದಾರೆ.

ಜನರ ಸಮಸ್ಯೆಗಳನ್ನು ಆಲಿಸಿದ ಪ್ರಹ್ಲಾದ್‌ ಜೋಶಿ..

ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಎಸ್‌ ಯಡಿಯೂರಪ್ಪ ಅಜ್ಞಾತ ಸ್ಥಳಕ್ಕೆ ಹೋಗಿಲ್ಲ. ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದಷ್ಟು ಬೇಗ ಖಾತೆ ಹಂಚಿಕೆಯಾಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಇನ್ನು ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನಡೆಸಲಿದ್ದು,‌ ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸುವಂತಹ ಕೆಲಸ ನಡೆದಿದೆ.‌ ಜೆಡಿಎಸ್-ಕಾಂಗ್ರೆಸ್ ಮುಳುಗುತ್ತಿರುವ ಹಡಗುಗಳು. ಮುಳುಗುತ್ತಿರುವ ಹಡಗಿನಲ್ಲಿ ಹೋಗಿ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ. ಹಾಗಾಗಿ ಉಮೇಶ ಕತ್ತಿ ಜೆಡಿಎಸ್​ನವರ ಸಂಪರ್ಕದಲ್ಲಿರುವ ವಿಚಾರ ಶುದ್ದ ಸುಳ್ಳು. ಕೇಂದ್ರದ ನಮ್ಮ ನಾಯಕರು ಹೊಸ ಯೋಚನೆಯಿಂದ ಹೊಸ‌ ಪ್ರಯೋಗಕ್ಕಾಗಿ ಲಕ್ಷಣ ಸವದಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗೆಯೇ ಮಹೇಶ್​ ಕುಮಟಳ್ಳಿ ಅವರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಪೂರ್ಣ ಆಡಳಿತ ನಡೆಸಲಿದೆ ಎಂದರು.

ಮೈತ್ರಿ ಸರ್ಕಾರ ಒಳಜಗಳದಿಂದಲೇ ಬಿದ್ದಿದ್ದು:

ಮೈತ್ರಿ ಸರ್ಕಾರದಲ್ಲಿ ಒಳಜಗಳಗಳು ಇರುವುದರಿಂದಲೇ ಸರ್ಕಾರ ಪತನಗೊಂಡಿದ್ದು, ಈ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಇದೀಗ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಬಿಜೆಪಿಯವರೇ ಮೈತ್ರಿ ಸರ್ಕಾರವನ್ನು ಉರುಳಿಸಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್​ನವರು ಜನರ ಮುಂದೆ ಬಿಂಬಿಸಿದ್ದಾರೆ. ಆದರೆ, ಸತ್ಯ ಒಂದು ದಿನ ಹೊರಗೆ ಬರುತ್ತದೆ ಎನ್ನುವುದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಯೇ ಉದಾಹರಣೆ ಎಂದರು.

ಇನ್ನು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕಾನೂನಿಗೆ ಬೆಲೆ ಇಲ್ಲದಂತೆ ನಡೆದುಕೊಂಡಿದ್ದಾರೆ. ಆದರೆ, ಕಾಂಗ್ರೆಸ್​ನವರಿಗೆ ಯಾವುದನ್ನು ವಿರೋಧ ಮಾಡಬೇಕು ಮತ್ತು ಬೆಂಬಲ ಸೂಚಿಸಬೇಕೆಂಬುದು ಗೊತ್ತಿಲ್ಲ. ‌ಹೀಗಾಗಿ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗಿಳಿದಿದೆ ಎಂದು ಗಂಭೀರವಾಗಿ ಆರೋಪಿಸಿದರು.

Intro:ಹುಬ್ಬಳಿBody:Central

ಸ್ಲಗ್: ಅನರ್ಹ ಶಾಸಕರು ಅರ್ಹರಾಗುತ್ತಾರೆ....! ಯಾವುದೇ ಅನುಮಾನ ಬೇಡ.ಜೋಶಿ.

ಹುಬ್ಬಳ್ಳಿ:-ಬಿ.ಎಸ್ ಯಡಿಯೂರಪ್ಪ ಅಜ್ಞಾತ ಸ್ಥಳಕ್ಕೆ ಹೋಗಿಲ್ಲ ಇದೂ ಉಹಾಪೂಹವಷ್ಟೆ. ಅನರ್ಹ ಶಾಸಕರುಗಳು ಅರ್ಹ ಶಾಸಕರಾಗುತ್ತಾರೆ. ಸುಪ್ರೀಂ ಕೋರ್ಟ್ ನಲ್ಲಿ ಅವರಿಗೆ ಜಯಸಿಗುತ್ತೆ. ನಾಲ್ಕು ವರ್ಷಗಳ ಕಾಲ ಬಿಜೆಪಿ ಸಂಪೂರ್ಣವಾಗಿ ಆಡಳಿತ ನಡೆಸುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯ ತಮ್ಮನಿವಾಸದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದಷ್ಟು ಬೇಗ ಖಾತೆ ಹಂಚಿಕೆಯಾಗಲಿದೆ ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತವನ್ನು ನೀಡಲಿದೆ.‌ ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸುವಂತಹ ಕೆಲಸ ನಡೆದಿದೆ.‌ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ‌ ಕಾಲ ಪೂರ್ಣ ಆಡಳಿತ ನೀಡಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜೆಡಿಎಸ್ - ಕಾಂಗ್ರೆಸ್ ಮುಳುಗುತ್ತಿರುವ ಹಡಗುಗಳು. ಮುಳುಗುತ್ತಿರುವ ಹಡಗಿನಲ್ಲಿ ಹೋಗಿ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ. ಹಾಗಾಗಿ ಉಮೇಶ ಕತ್ತಿ ಜೆಡಿಎಸ್ ನವರ ಸಂಪರ್ಕದಲ್ಲಿರುವ ವಿಚಾರ ಶುದ್ದ ಸುಳ್ಳು. ಕೇಂದ್ರದ ನಮ್ಮ ನಾಯಕರು ಹೊಸ ಯೋಚನೆಯಿಂದ ಹೊಸ‌ ಪ್ರಯೋಗಕ್ಕಾಗಿ ಲಕ್ಷಣ ಸವದಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು. ಆ ವಿಷಯದ ಕುರಿತು ಯಾವುದೇ ರೀತಿ ಬಹಿರಂಗ ಪಡಿಸಲು ಆಗುವುದಿಲ್ಲ.‌ ಹಾಗೇ ಮಹೇಶ ಕುಮಟಳ್ಳಿ ಅವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಪೂರ್ಣ ಆಡಳಿತ ನಡೆಸಲಿದೆ ಎಂದರು.
(ಮೈತ್ರಿ ಒಳಜಗಳದಿಂದಲ್ಲೇ ಬಿದದ್ದು)ಮೈತ್ರಿ ಸರ್ಕಾರಗಳಲ್ಲಿ ಒಳಜಗಳಗಳು ಇರುವದರಿಂದಲ್ಲೇ ಸರ್ಕಾರ ಪತನಗೊಂಡಿದ್ದು, ಈ ಬಗ್ಗೆ ಹಿಂದೆಯೇ ಹೇಳಿದ್ದೆನೆ ಇದೀಗ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದರು..ಬಿಜೆಪಿಯವರೇ ಮೈತ್ರಿ ಸರ್ಕಾರವನ್ನು ಉರುಳಿಸುತ್ತಿದ್ದಾರೆ ಎಂದು ಕಾಂಗ್ರೆಸ್- ಜೆಡಿಎಸ್ ನವರು ಜನರ ಮುಂದೆ ಬಿಂಬಿಸಿದ್ದಾರೆ. ಆದರೆ ಸತ್ಯ ಒಂದಿಲ್ಲ‌ ಒಂದು ದಿನ ಹೊರಗೆ ಬರುತ್ತದೆ ಎನ್ನುವುದಕ್ಕೆ ಜೆಡಿಎಸ್ ವರಿಷ್ಠ ದೇವೆಗೌಡರ ಹೇಳಿಕೆನೇ ಉದಾಹರಣೆ. ಅಧಿಕಾರದ ವ್ಯಾಮೋಹದಿಂದ ಮೈತ್ರಿ ಸರ್ಕಾರ ರಚನೆ ಮಾಡಿದರು. ಆದರೆ ತಮ್ಮ ಒಳ ಭೇಗುದಿಯಿಂದಾಗಿ ಮೈತ್ರಿ ಸರ್ಕಾರ ಅಧೋಗತ್ತಿಗೆ ಬಂದಿದೆ.‌ ಇದು ದೇಶದಲ್ಲೇ ಕಾಂಗ್ರೆಸ್ ಪಕ್ಷದ ಭೌದ್ಧಿಕ ದಿವಾಳಿಕೋರತನಕ್ಕೆ ಸಾಕ್ಷಿಯಾಗಿದೆ. ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕಾನೂನಿಗೆ ಬೆಲೆ ಇಲ್ಲದಂತೆ ನಡೆದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನವರಿಗೆ ಯಾವುದನ್ನು ವಿರೋಧ ಮಾಡಬೇಕು ಮತ್ತು ಬೆಂಬಲ ಸೂಚಿಸಬೇಕೆಂಬುದು ಗೊತ್ತಿಲ್ಲ. ‌ಹೀಗಾಗಿ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ತೆರಳಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ...

_____________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳ

Conclusion:ಯಲ್ಲಪ್ಪ‌ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.