ಹುಬ್ಬಳ್ಳಿ : ಇಂಡಿಗೋ ವಿಮಾನಯಾನ ಹುಬ್ಬಳ್ಳಿಯಿಂದ ಮತ್ತೆರಡು ನಗರಗಳ ಜೊತೆ ನೇರ ಸಂಪರ್ಕ ಬೆಳೆಸಲಿದೆ. ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನೇರ ವಿಮಾನ ಸೇವೆಯನ್ನು ಜ.21ರಿಂದ ಪುನಾರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಓದಿ: ಬಾಲಾಕೋಟ್ ಏರ್ಸ್ಟ್ರೈಕ್ನಲ್ಲಿ 300 ಜನರು ಸಾವು: ಪಾಕ್ನ ಮಾಜಿ ಅಧಿಕಾರಿ
ಈ ಜೋಶಿ ಅವರು ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂಡಿಗೋ ಸಂಸ್ಥೆಯ ಹಿರಿಯ ಉನ್ನತ ಅಧಿಕಾರಿಗಳು ಇದೇ ಜನವರಿ 21ರಿಂದ ವಿಮಾನ ಸೇವೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.
ವಿಮಾನಯಾನದ ವಿವರ ಈ ಕೆಳಗಿನಂತಿದೆ :
ಸಮಯ :
* ಮಧ್ಯಾಹ್ನ 1.00ಕ್ಕೆ ಹುಬ್ಬಳ್ಳಿಯಿಂದ ಹೊರಟು 3.10ಕ್ಕೆ ಕೊಚ್ಚಿ ತಲುಪುವುದು
* ಮಧ್ಯಾಹ್ನ 3.45ಕ್ಕೆ ಕೊಚ್ಚಿಯಿಂದ ಹೊರಟು 5.30ಕ್ಕೆ ಹುಬ್ಬಳ್ಳಿಗೆ ತಲುಪುವುದು
* ಸಂಜೆ 6.00ಕ್ಕೆ ಹುಬ್ಬಳ್ಳಿಯಿಂದ ಹೊರಟು 7.00ಕ್ಕೆ ಗೋವಾ ತಲುಪುವುದು
* ಸಂಜೆ 7.30 ಕ್ಕೆ ಗೋವಾದಿಂದ ಹೊರಟು 8.30ಕ್ಕೆ ಹುಬ್ಬಳ್ಳಿ ತಲುಪುವುದು
ಈ ಕಾರ್ಯಕ್ಕೆ ಸಹಕರಿಸಿದ ಇಂಡಿಗೋ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಜೋಶಿ ಮನವಿ ಮಾಡಿದ್ದಾರೆ.