ಹುಬ್ಬಳ್ಳಿ: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕಲಘಟಗಿ ಪಟ್ಟಣದಲ್ಲಿ ತ್ರಿವರ್ಣ ಧ್ವಜ ರ‍್ಯಾಲಿ ನಡೆಸಲಾಗಿತ್ತು. ಮಾಜಿ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ನಡೆದ 2 ಕಿ.ಮೀ ಉದ್ದ ಹಾಗು 3 ಮೀ. ಅಗಲದ ಬೃಹತ್ ತ್ರಿವರ್ಣ ಧ್ವಜ ರ‍್ಯಾಲಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಸೇರಿದೆ.
ತ್ರಿವರ್ಣ ಧ್ವಜ ಜಾಥಾದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ರಾಷ್ಟ್ರಾಭಿಮಾನ ಮೆರೆದಿದ್ದರು. ಇಷ್ಟೊಂದು ದೊಡ್ಡ ಹಾಗು ಅಗಲದ ತ್ರಿವರ್ಣ ಧ್ವಜ ಅನಾವರಣ ಹಾಗು ರ‍್ಯಾಲಿ ಈವರೆಗೆ ಭಾರತದಲ್ಲಿ ಎಲ್ಲಿಯೂ ನಡೆದಿರಲಿಲ್ಲ. ಜಾಥಾದಲ್ಲಿ ಬಳಸಿದ ಧ್ವಜದ ಒಟ್ಟು ತೂಕ 350 ಕೆ.ಜಿಯಷ್ಟಿತ್ತು. ಈ ಧ್ವಜ ಸಿದ್ಧಪಡಿಸಲು 48 ಗಂಟೆಗಳ ಸಮಯಾವಕಾಶ ತೆಗೆದುಕೊಳ್ಳಲಾಗಿದ್ದು, 60 ಮಂದಿ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದರು.
ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯ ಕಲ್ಯಾಣ್ ಟೆಕ್ಸ್‌ಟೈಲ್ಸ್‌ನಲ್ಲಿ ಈ ಬೃಹತ್ ಧ್ವಜವನ್ನು ಸಿದ್ಧಪಡಿಸಲಾಗಿತ್ತು.
ಇದನ್ನೂ ಓದಿ: NSG ಪ್ಯಾನ್-ಇಂಡಿಯಾ 'ಸುದರ್ಶನ್ ಭಾರತ್ ಪರಿಕ್ರಮ' ಕಾರು ರ‍್ಯಾಲಿ ದೆಹಲಿಯಲ್ಲಿ ಅಂತ್ಯ: ಸಚಿವ ಸ್ಮೃತಿ ಇರಾನಿ ಸ್ವಾಗತ