ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದ ನಿವಾಸಿ ಶ್ರೀಕಾಂತ್ ಹಾಗೂ ಚಾರುಲತಾ ದಂಪತಿಯ ಪುತ್ರನ ಸಾಧನೆಯೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದೆ. ಹೌದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಎರಡೂವರೆ ವರ್ಷ ವಯಸ್ಸಿನ ಸಮುರ್ದ್ ತನ್ನ ಅಗಾಧ ಜ್ಞಾಪಕ ಶಕ್ತಿ ಹೊಂದಿದ್ದಾನೆ.
ಚಿಕ್ಕ ವಯಸ್ಸಿನಲ್ಲೇ ಬಹಳ ತುಂಟ ಆಗಿರುವ ಸಮುರ್ದ್ ಟ್ಯಾಲೆಂಟ್ ನೋಡಿದ ಕುಟುಂಬಸ್ಥರು ಹಂತಹಂತವಾಗಿ ಎಲ್ಲವನ್ನೂ ಕಲಿಸುತ್ತಾ ಬಂದಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಪದಗಳ ಬಳಕೆ, ನದಿಗಳ ಹೆಸರು, ತಿಂಗಳುಗಳನ್ನು ಹೇಳುವುದು, ದೇಶ ಹಾಗೂ ರಾಜ್ಯದ ರಾಜಕೀಯ ವ್ಯಕ್ತಿಗಳ ಹೆಸರು, ಪ್ರಾಣಿ, ಪಕ್ಷಿ, ಹಣ್ಣು ಸೇರಿದಂತೆ ಅನೇಕ ವಿಚಾರಗಳನ್ನು ಸಲೀಸಾಗಿ ಹೇಳುವ ಅತ್ಯುತ್ತಮ ಪ್ರತಿಭೆ ಈತನಿಗಿದೆ.
ಈತನ ಪ್ರತಿಭೆ ಬಗ್ಗೆ ಎಲ್ಲರಿಗೂ ತಿಳಿಸುವ ಸಲುವಾಗಿ ಪೋಷಕರು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಿದ್ದರು. ಅನೇಕ ಸ್ಪರ್ಧಿಗಳ ಪೈಕಿ ಈತನ ಟ್ಯಾಲೆಂಟ್ ಮೆಚ್ಚಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಈತನ ಹೆಸರು ನೋಂದಣಿ ಮಾಡಿ, ಇದೇ ಜನವರಿ 4 ರಂದು ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಿದೆ.
15ಕ್ಕೂ ಹೆಚ್ಚು ಯೋಗಾಸನ ಮಾಡ್ತಾನೆ ಬಾಲಕ.. ಈ ಪುಟ್ಟ ಪೋರ ಈಗಲೇ ಯೋಗಾಸನದ ವಿವಿಧ ಭಂಗಿಗಳಾದ ಭುಜಂಗಾಸನ, ಪವನ ಮುಕ್ತಾಸನ, ಅರ್ಧಮಂಡುಕಾಸನ, ಪಾದ ಹಸ್ತಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈತನ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಲಭಿಸಿರುವುದಕ್ಕೆ ಕುಟುಂಬಸ್ಥರು ಸೇರಿ ಅನೇಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ಮಂದಿರ ಭರ್ತಿಗೆ ಅವಕಾಶ ನೀಡುವಂತೆ ಸಿಎಂ ಜತೆ ಮಾತನಾಡುತ್ತೇನೆ : ನಟ ಶಿವರಾಜ್ ಕುಮಾರ್