ETV Bharat / city

ಹುಬ್ಬಳ್ಳಿ ಗಲಭೆ ಪ್ರಕರಣ: ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆಗೆ ಯತ್ನ!

author img

By

Published : Apr 30, 2022, 12:12 PM IST

Hubli riots case: ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯಲ್ಲಿದ್ದ ಆರೋಪಿ ಮಹ್ಮದ್ ಆರೀಫ್ ನಾಗರಾಳ ಟರ್ಪಂಟೈಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿದೆ.

Hubli riots case
ಹುಬ್ಬಳ್ಳಿ ಗಲಭೆ ಪ್ರಕರಣ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ ಮಹ್ಮದ್ ಆರೀಫ್ ಗುರುವಾರ ಮಧ್ಯ ರಾತ್ರಿ ಟರ್ಪಂಟೈಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಲಭೆ ಪ್ರಕರಣ ಸಂಬಂಧ ಪೊಲೀಸ್​​​​ ಕಸ್ಟಡಿಯಲ್ಲಿ ವಿಚಾರಣೆಯಲ್ಲಿದ್ದ ಆರೀಫ್, ಅಲ್ಲಿದ್ದ ಸಿಬ್ಬಂದಿಗೆ ಟರ್ಪಂಟೈಲ್‌ ನೀಡುವಂತೆ ವಿನಂತಿಸಿದ್ದಾನೆ.

ಗಾಯಕ್ಕೆ ಹಚ್ಚಲು ಕೇಳಿರಬಹುದು ಎಂದು ಸಿಬ್ಬಂದಿ ಅದರ ಬಾಟಲ್ ನೀಡಿದ್ದಾರೆ. ಅದನ್ನು ಪಡೆದ ಮಹ್ಮದ್ ಆರೀಫ್ ತಕ್ಷಣ ಕುಡಿದಿದ್ದಾನೆ. ಅಲ್ಲಿಯೇ ಇದ್ದ ಮತ್ತೊಬ್ಬ ಆರೋಪಿ ಮಹಾನಗರ ಪಾಲಿಕೆಯ ಎಐಎಂಐಎಂ ಸದಸ್ಯ ನಸೀರ್ ಅಹ್ಮದ್ ಹೊನ್ಯಾಳ ಅದನ್ನು ನೋಡಿ ಬಾಟಲಿ ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ.

ತಕ್ಷಣ ಮಹ್ಮದ್ ಆರೀಫ್ ನನ್ನು‌ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆತ ಚೇತರಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಠಾಣೆಯಲ್ಲಿ ಸತ್ಯ ಬಾಯಿ ಬಿಡಿಸಲು ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಹೀಗಾಗಿ ಮೈಗೆ ಹಚ್ಚಿಕೊಳ್ಳಲು ಟರ್ಪಂಟೈಲ್‌ ಕೇಳಿದ್ದ. ಆಗ ಕಾಲಿಗೆ ಹಚ್ಚಿಕೊಳ್ಳುವ ಬದಲು ಕುಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಸಿಕ್ತು ಸಾಕ್ಷ್ಯ: ವಾಣಿಜ್ಯ ನಗರಿಯಲ್ಲಿ ಆ ಆಡಿಯೋ ಹೊತ್ತಿಸಿತಾ ಕಿಡಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.