ETV Bharat / city

ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ, ಪರೀಕ್ಷೆ ಬರೆಯಲು ಅನುಮತಿ - ಪಿಯುಸಿ ಪರೀಕ್ಷೆ 2022

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಆದ್ರೆ ಪರೀಕ್ಷೆಗ ಬರೆಯಲು ಅನುಮತಿ ನೀಡಿದೆ.

main accused bail plea rejected by Court, Hubli riot case, Hubli violence case, PUC exam 2022, PU student bail plea rejected, ಪ್ರಮುಖ ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ಹುಬ್ಬಳ್ಳಿ ಗಲಭೆ ಪ್ರಕರಣ, ಹುಬ್ಬಳ್ಳಿ ಹಿಂಸಾಚಾರ ಪ್ರಕರಣ, ಪಿಯುಸಿ ಪರೀಕ್ಷೆ 2022, ಪಿಯು ವಿದ್ಯಾರ್ಥಿ ಜಾಮೀನು ಅರ್ಜಿ ತಿರಸ್ಕೃತ,
ಆರೋಪಿ ಜಾಮೀನು ಅರ್ಜಿ ವಜಾ, ಪರೀಕ್ಷೆ ಬರೆಯಲು ಅನುಮತಿಸಿದ ಕೋರ್ಟ್​
author img

By

Published : Apr 21, 2022, 9:25 AM IST

Updated : Apr 21, 2022, 11:06 AM IST

ಹುಬ್ಬಳ್ಳಿ: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಶುರುವಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಆದ್ರೆ ಇತ್ತೀಚೆಗೆ ನಗರದಲ್ಲಿ ನಡೆದ ಕೋಮುಗಲಭೆಗೆ ಕಾರಣವಾಗಿದ್ದ ಆರೋಪಿ ಅಭಿಷೇಕ್​ ಪರೀಕ್ಷೆ ಬರೆಯಲು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದ್ರೆ ನ್ಯಾಯಾಲಯ ಆರೋಪಿ ಅಭಿಷೇಕ್​ ಅರ್ಜಿಯನ್ನು ವಜಾಗೊಳಿಸಿದೆ.

ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ : ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಸಂಚು ಬಹಿರಂಗ

ವಾಟ್ಸಾಪ್​​ನಲ್ಲಿ ವಿವಾದಾತ್ಮಕ ಸ್ಟೇಟಸ್​ ಇರಿಸಿ ಕೋಮು ಗಲಭೆಗೆ ಕಾರಣವಾಗಿ ಬಂಧಿತನಾಗಿರುವ ಹಳೆ ಹುಬ್ಬಳ್ಳಿಯ ಆನಂದನಗರ ನಿವಾಸಿ ಅಭಿಷೇಕ ಹಿರೇಮಠಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆದರೆ ಪೊಲೀಸ್​ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ.

main accused bail plea rejected by Court, Hubli riot case, Hubli violence case, PUC exam 2022, PU student bail plea rejected, ಪ್ರಮುಖ ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ಹುಬ್ಬಳ್ಳಿ ಗಲಭೆ ಪ್ರಕರಣ, ಹುಬ್ಬಳ್ಳಿ ಹಿಂಸಾಚಾರ ಪ್ರಕರಣ, ಪಿಯುಸಿ ಪರೀಕ್ಷೆ 2022, ಪಿಯು ವಿದ್ಯಾರ್ಥಿ ಜಾಮೀನು ಅರ್ಜಿ ತಿರಸ್ಕೃತ,
ಆರೋಪಿ ಜಾಮೀನು ಅರ್ಜಿ ವಜಾ, ಪರೀಕ್ಷೆ ಬರೆಯಲು ಅನುಮತಿಸಿದ ಕೋರ್ಟ್​

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಆರೋಪಿ ಅಭಿಷೇಕ್​ ಹಿರೇಮಠ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿದೆ. ಏಪ್ರಿಲ್ 22 ರಿಂದ ಮೇ 16 ರವರಗೆ ಪರೀಕ್ಷೆ ಹಾಜರಾಗಲು ಅನುಮತಿ ನೀಡಿದೆ. ಹಳೇ ಹುಬ್ಬಳ್ಳಿ ಪೊಲೀಸರ ಬೆಂಗಾವಲು ಭದ್ರತೆ ನೀಡುವಂತೆ ಸೂಚನೆ ನೀಡಿದೆ‌.

ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ವಿಡಿಯೋ ಹರಿಬಿಟ್ಟಿದ್ದ ಆರೋಪಿಗೆ ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನ

ಜೈಲಿನಲ್ಲಿನಲ್ಲಿ ಪ್ರತ್ಯೇಕ ಸೆಲ್ ವ್ಯವಸ್ಥೆ, ಓದಲು ಬೇಕಾದ ಪುಸ್ತಕ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಕೋರ್ಟ್ ಅದೇಶ ನೀಡಿದೆ. ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಅಭಿಷೇಕ್​ ಪರ ವಕೀಲ ಸಂಜೀವ್ ಬಡಸ್ಕರ್ ಕೋರ್ಟ್ ಮೆಟ್ಟಿಲೇರಿ ವಾದ ಮಂಡನೆ ಮಾಡಿದ್ದರು‌. ಆದ್ರೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹುಬ್ಬಳ್ಳಿಯ 4 ನೇ ಜೆಂಎಂಎಫ್​ಸಿ‌ ಕೋರ್ಟ್ ಅಭಿಷೇಕ್​ಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

Last Updated : Apr 21, 2022, 11:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.