ಹುಬ್ಬಳ್ಳಿ: ಕೊರೊನಾ ವಿಚಾರದಲ್ಲಿ ಪೊಲೀಸರು ದಂಡ ವಸೂಲಿ ಮಾಡುತ್ತಾರೆ ಎಂಬ ಸಾರ್ವಜನಿಕರ ಆರೋಪದ ನಡುವೆಯೂ ಟ್ರಕ್ ಹಾಗೂ ಲಾರಿ ಚಾಲಕರಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಲಾಕ್ಡೌನ್ ಜಾರಿ ಮಾಡಿದ್ದು, ಅಗತ್ಯ ವಸ್ತುಗಳು ಹಾಗೂ ಹೋಟೆಲ್ ಬಂದ್ ಮಾಡಿರುವ ಪರಿಣಾಮ ಟ್ರಕ್ ಹಾಗೂ ಲಾರಿ ಚಾಲಕರು ಹಸಿವಿನಿಂದ ಬಳಸಬಾರದು ಎಂದು ಪೊಲೀಸರು ಉಪಹಾರ ನೀಡಿ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.