ಹುಬ್ಬಳ್ಳಿ : ಲಾಕ್ ಡೌನ್ ಸಡಲಿಕೆ ಬಳಿಕ ವಿಮಾನ ಪ್ರಯಾಣ ಪ್ರಾರಂಭವಾಗಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಂತಾರಾಜ್ಯ ಪ್ರಯಾಣ ಕೂಡ ಪ್ರಾರಂಭಗೊಂಡಿದೆ.
ಈಗಾಗಲೇ ಸ್ಟಾರ್ ಏರ್ ಲೈನ್ಸ್ ಹಾಗೂ ಇಂಡಿಗೋ ವಿಮಾನ ಕಾರ್ಯಾರಂಭ ಮಾಡಿದ್ದು, ಹುಬ್ಬಳ್ಳಿಯಿಂದ ಇಂಡಿಗೋ ಸಂಸ್ಥೆಯ ವಿಮಾನ ಹೈದರಾಬಾದ್ಗೆ ಸಂಚಾರ ಪ್ರಾರಂಭಿಸಲಿದೆ.
ವಿಮಾನಯಾಕ್ಕಾಗಿ ಈ ಹಿಂದೆಯಷ್ಟೇ ಇಂಡಿಗೋ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಪ್ರಯಾಣದ ದಿನಾಂಕ ಹಾಗೂ ಮಾಹಿತಿಯನ್ನು ಸಂಸ್ಥೆ ಇನ್ನಷ್ಟೇ ನೀಡಬೇಕಿದೆ.