ETV Bharat / city

DCPಗೆ ನಿಂದನೆ ಆರೋಪ: ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆ ಮುಖಂಡನ ವಿರುದ್ಧ FIR

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯ ಹಿಂದೂ ಸಂಘಟನೆ ಮುಖಂಡ ಅಶೋಕ ಅಣ್ವೇಕರ್ ವಿರುದ್ಧ ನವನಗರ ಠಾಣೆಯಲ್ಲಿ ಡಿಸಿಪಿ ಕೆ.ರಾಮರಾಜನ್ ದೂರು ದಾಖಲಿಸಿದ್ದಾರೆ.

Hubli
ಹುಬ್ಬಳ್ಳಿಯ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ
author img

By

Published : Oct 20, 2021, 1:12 PM IST

ಹುಬ್ಬಳ್ಳಿ: ಮತಾಂತರಕ್ಕೆ ಯತ್ನಿಸಿದ ಆರೋಪಿಗಳ ಪರ ಡಿಸಿಪಿ ನಿಂತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಆವರಣದಲ್ಲಿ ಡಿಸಿಪಿಗೆ ನಿಂದಿಸಿದ ವ್ಯಕ್ತಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ನಗರದ ವಕೀಲ ಹಾಗೂ ಹಿಂದೂ ಸಂಘಟನೆ ಮುಖಂಡ ಅಶೋಕ ಅಣ್ವೇಕರ್ ವಿರುದ್ಧ ನವನಗರ ಠಾಣೆಯಲ್ಲಿ ಡಿಸಿಪಿ ಕೆ.ರಾಮರಾಜನ್ ದೂರು ದಾಖಲಿಸಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಧರ್ಮ ನಿಂದನೆ, ಶಾಂತಿ ಭಂಗ ಪ್ರಕರಣ ದಾಖಲಿಸಲಾಗಿದೆ.

complaint copy
ದೂರು ಪ್ರತಿ

ಮತಾಂತರ ವಿರೋಧಿಸಿ ಹುಬ್ಬಳ್ಳಿಯ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ವಕೀಲ ಹಾಗು ಹಿಂದೂ ಸಂಘಟನೆ ಮುಖಂಡ ಅಶೋಕ ಅಣ್ವೇಕರ ಡಿಸಿಪಿಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎನ್ನಲಾಗ್ತಿದೆ. ಅದೇ ಸಂದರ್ಭ ಡಿಸಿಪಿ ‌ಕೂಡ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು.

complaint copy
ದೂರು ಪ್ರತಿ

ಅಶೋಕ ಅಣ್ವೇಕರ್ ಸೇರಿ ಪ್ರತಿಭಟನೆಯಲ್ಲಿ 100 ಜನ ಭಾಗಿಯಾಗಿದ್ದರು. ಬಜರಂಗದಳ ಹಾಗು ಇತರ ಹಿಂದೂ ಪರ ಸಂಘಟನೆಯ 100 ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 504, 143, 147, 153, 295A, 298, 353 ಅಡಿ ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪ : ಆರೋಪಿ‌ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.