ETV Bharat / city

ದಾರಿತಪ್ಪಿದ ಮತ್ತೊಂದು ಸ್ಮಾರ್ಟ್ ಸಿಟಿ ಯೋಜನೆ: ಹಳ್ಳ ಹಿಡಿದ ಆರ್‌ಎಫ್‌ಐಡಿ ರೀಡಿಂಗ್ - ಆರ್‌ಎಫ್‌ಐಡಿ ಟ್ಯಾಗ್ ರೀಡರ್ ಯಂತ್ರ

ಆರ್‌ಎಫ್‌ಐಡಿ ಟ್ಯಾಗ್, ರೀಡರ್, ಟಿಪಿಎ‌ ಹಾಗೂ 5 ವರ್ಷಗಳ ನಿರ್ವಹಣೆ ಎಲ್ಲ ಸೇರಿ 43.50 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ನಿರ್ವಹಣೆ ಇಲ್ಲದೆ ಯೋಜನೆ ಹಳ್ಳ ಹಿಡಿದರೂ ಮೇಲ್ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧರಿಲ್ಲ.

failure of RFID tag reading
ಹಳ್ಳ ಹಿಡಿದ ಆರ್‌ಎಫ್‌ಐಡಿ ರೀಡಿಂಗ್
author img

By

Published : Jul 29, 2022, 8:26 AM IST

Updated : Jul 30, 2022, 6:16 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಒಂದೊಂದಾಗಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಉದ್ಘಾಟನೆಗೊಳ್ಳುತ್ತಿವೆ. ಇನ್ನೊಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ವೈಫಲ್ಯಗಳ ಪಟ್ಟಿಯೂ ಬೆಳೆಯುತ್ತಿದೆ. ಅವಳಿ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯ ಕಾರ್ಯಕ್ಷಮತೆಯಲ್ಲಿ ನಿಖರತೆ ತರಲು ರೂಪಿಸಲಾದ ಡಿಜಿಟಲ್ ಸ್ವರೂಪದ ವಿನೂತನ ಯೋಜನೆ ನಿರ್ವಹಣೆ ಆಗದೆ ದಾರಿ ತಪ್ಪಿದೆ.

ನಗರಗಳು ಸ್ಮಾರ್ಟ್ ಕಾಣಲು ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೋಟಿ ಕೋಟಿ ಹಣವನ್ನು ನೀರಿನಲ್ಲಿ ಹೋಮ‌‌ ಮಾಡಿದ್ದಾರೆ. ಇದರಿಂದಾಗಿ ಈ ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ಹುಬ್ಬಳ್ಳಿ-ಧಾರವಾಡ‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ‌ ಸಂಗ್ರಹಣೆ ಮಾಡುವುದೇ ಒಂದು ದೊಡ್ಡ ಸವಾಲಾಗಿದೆ.

ಆ ತೊಂದರೆಯನ್ನು ಬಗೆಹರಿಸಲು ಪ್ರತಿ ಮನೆಯ ಕಸ ಸಂಗ್ರಹಣೆಯನ್ನು ದೃಢಿಪಡಿಸಲು ಉದ್ದೇಶದಿಂದ ಆರ್‌ಎಫ್ಐಡಿ ಯೋಜನೆಯನ್ನು ಅವಳಿನಗರಕ್ಕೆ ತರಲಾಗಿದೆ. ಆರ್‌ಎಫ್‌ಐಡಿ ಟ್ಯಾಗ್ ರೀಡರ್​ಗಳನ್ನು ಮನೆಗಳಿಗೆ ಅಳವಡಿಸಲಾಗಿದೆ. ಆದ್ರೆ ಯಂತ್ರದಲ್ಲಿನ ದೋಷ, ಪೌರ ಕಾರ್ಮಿಕರ ನಿರಾಸಕ್ತಿ, ಅಧಿಕಾರಿಗಳ ಮೇಲ್ವಿಚಾರಣೆ ಕೊರತೆಯಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ಉದ್ದೇಶ ಮಾತ್ರ ಈಡೇರುತ್ತಿಲ್ಲ. ಅವಳಿ ನಗರದಲ್ಲಿ 2.12 ಲಕ್ಷ ಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಲಾಗಿದೆ. ಅದರಂತೆ ನಿತ್ಯ ಟ್ಯಾಗ್ ರೀಡಿಂಗ್ ಪ್ರಮಾಣ 2.12 ಲಕ್ಷ ಇರಬೇಕಿತ್ತು. ಆದರೆ 40-45 ಸಾವಿರ ಟ್ಯಾಗ್ ರೀಡಿಂಗ್ ದಾಖಲಾಗುತ್ತಿದೆ.

ಹಳ್ಳ ಹಿಡಿದ ಯೋಜನೆ: ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನೆ, ಉದ್ಘಾಟನೆ, ವಿಸ್ತರಣೆ ಎಲ್ಲವೂ ನಡೆಯುತ್ತದೆ. ಆದರೆ, ಜಾರಿಯಾದ ಬಳಿಕ ಮೇಲ್ವಿಚಾರಣೆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಯೋಜನೆಯ ಬಗ್ಗೆ ಹೆಮ್ಮೆಪಡುವ ಜನಪ್ರತಿನಿಧಿಗಳು, ಮೇಲ್ವಿಚಾರಣೆಯ ಜವಾಬ್ದಾರಿ ಮರೆತಿರುವುದರಿಂದ ಒಂದು ಸುಧಾರಿತ ವ್ಯವಸ್ಥೆಯ ಸ್ಥಿತಿಯು ಈ ಹಂತಕ್ಕೆ ಬಂದು ಮುಟ್ಟಿದೆ.

ಪ್ರತಿ ಆ‌ರ್‌ಎಫ್‌ಐಡಿ ಟ್ಯಾಗ್​ 54 ರೂಪಾಯಿ, ರೀಡರ್ ವೆಚ್ಚ 61 ಸಾವಿರ ರೂಪಾಯಿ. ಅವಳಿ ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ನ್ಯೂ ಕಾಟನ್ ಮಾರ್ಕೆಟ್‌ ಪ್ರದೇಶದಲ್ಲಿ ಇಂಟೆಗ್ರೇಟೆಡ್ ಕಮಾಂಡ್ ಆ್ಯಂಡ್​ ಕಂಟ್ರೋಲ್ ಸೆಂಟರ್ (ಐಸಿಸಿ) ಸ್ಥಾಪಿಸಲಾಗಿದೆ. ಆರ್‌ಎಫ್‌ಐಡಿ ಟ್ಯಾಗ್, ರೀಡರ್, ಟಿಪಿಎ‌ ಹಾಗೂ 5 ವರ್ಷಗಳ ನಿರ್ವಹಣೆ ವೆಚ್ಚ ಎಲ್ಲ ಸೇರಿ 43.50 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ.

ಜವಾಬ್ದಾರಿಯಿಂದ ನುಣುಚಿಕೊಂಡ ಅಧಿಕಾರಿಗಳು: ಮುಂಬೈ ಮೂಲದ ಎನ್‌ಇಸಿ ಟಿಮಿಟೆಡ್ ಈ ಯೋಜನೆಯ ಗುತ್ತಿಗೆ ಪಡೆದಿದೆ. ಮುಂದಿನ 5 ವರ್ಷಗಳ ಕಾಲ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆಯು ಗುತ್ತಿಗೆದಾರರದ್ದೇ ಆಗಿರುವುದರಿಂದ ಪಾಲಿಕೆ ಹಾಗು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈ ವೈಫಲ್ಯಕ್ಕೆ ಉತ್ತರದಾಯಿತ್ವವನ್ನು ಯಾರೂ ವಹಿಸಿಕೊಳ್ಳುತ್ತಿಲ್ಲ.

ಎಲ್ಲ ವಾರ್ಡ್‌ಗಳಿಗೆ ಆರ್‌ಎಫ್ಐಡಿ ಟ್ಯಾಗ್ ಅಳವಡಿಕೆಯನ್ನು 2021 ರ ಜನವರಿಯಲ್ಲಿ ಪೂರ್ಣಗೊಳಿಸಿ ನಿತ್ಯ ರೀಡಿಂಗ್ ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ಮನೆಯ ಗೋಡೆ ಅಥವಾ ಕಾಂಪೌಂಡ್‌ಗೆ ಟ್ಯಾಗ್ ಅಳವಡಿಸಲಾಗಿದೆ. ಆಟೋ ಟಿಪ್ಪರ್ ಜತೆ ಕಸ ಸಂಗ್ರಹಕ್ಕೆ ಮನೆ ಮನೆಗೆ ಬರುವ ಪೌರ ಕಾರ್ಮಿಕರಲ್ಲಿ ಒಬ್ಬರು ರೀಡರ್ ಅನ್ನು ಆರ್‌ಏಫ್‌ಐಡಿ ಟ್ಯಾಗ್ ಸನಿಹಕ್ಕೆ ಹಿಡಿದು ದಾಖಲಿಸಿಕೊಳ್ಳುತ್ತಾರೆ. ಟ್ಯಾಗ್ ರೀಡರ್‌ ಚಾರ್ಜ್ ಮಾಡುವುದು ಪರ ಕಾರ್ಮಿಕರೇ ಆಗಿದ್ದರೂ, ಆ ಕಾರ್ಯವನ್ನು ಅವರು ಎಷ್ಟರ ಮಟ್ಟಿಗೆ ಸರಿಯಾಗಿ ಮಾಡುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಹುಬ್ಬಳ್ಳಿ-ಧಾರವಾಡದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಯಾವುದೇ ಒಂದು ಕಾಮಗಾರಿಗಳು ಸಹ ‌ಪೂರ್ಣಗೊಂಡಿಲ್ಲ.‌ ಒಂದೊಂದು ಕಾಮಗಾರಿ ಅಂತ್ಯವಾದರೂ ಇದರಿಂದ ಜನರಿಗೆ ‌ಉಪಯೋಗ ಮಾತ್ರ ಆಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ‌ ನೂರಾರು ಕೋಟಿ‌ ರೂಪಾಯಿ ಹಣ ಪೋಲಾಗುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ : ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ದೋಖಾ ಆರೋಪ: ಲೋಕಾಯುಕ್ತಕ್ಕೆ ದೂರು

Last Updated : Jul 30, 2022, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.