ಹುಬ್ಬಳ್ಳಿ: ಲಾಕ್ಡೌನ್ ಆದೇಶದಿಂದಾಗಿ ಸುಮಾರು ಎರಡು ತಿಂಗಳ ಕಾಲ ಸ್ತಬ್ಧವಾಗಿದ್ದ ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣ ಜೂ. 01 ರಿಂದ ಮತ್ತೆ ಕಾರ್ಯಾರಂಭ ಮಾಡಲಿದೆ.
ಸಾರ್ವಜನಿಕ ಪ್ರವೇಶ ನಿಷೇಧಿಸಿ ಆಯ್ದ ವಕೀಲರು, ನ್ಯಾಯಾಧೀಶರು ಮತ್ತು ಕೆಲವು ಸಿಬ್ಬಂದಿಗೆ ಮಾತ್ರ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕಾರ್ಯಾರಂಭ ಮಾಡಲಿದೆ. ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣದಲ್ಲಿ ಒಟ್ಟು 18 ನ್ಯಾಯಾಲಯಗಳಿದ್ದು, ಜೂ. 01 ರಿಂದ 9 ನ್ಯಾಯಾಲಯಗಳ ಕಾರ್ಯನಿರ್ವಹಿಸಲಿವೆ. ಅಲ್ಲದೇ ಒಂದು ದಿನಕ್ಕೆ 09 ನ್ಯಾಯಾಲಯಗಳು ಹಾಗೂ ಮರುದಿನ ಉಳಿದ 09 ನ್ಯಾಯಲಯಗಳು ಕಲಾಪ ನಡೆಸಲಿದ್ದು, ನ್ಯಾಯಾಲಯದಲ್ಲಿ 10 ರಿಂದ 20 ಜನ ವಕೀಲರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿದ್ದು, ಈ ಹಿನ್ನೆಲೆ ಬೆಳಿಗ್ಗೆ 10 ಹಾಗೂ ಮಧ್ಯಾಹ್ನ 10 ಪ್ರಕರಣ ವಿಚಾರಣೆ ನಡೆಯಲಿದೆ. ಸಾರ್ವಜನಿಕರು ಅಗತ್ಯವಿದ್ದರೂ ಕೂಡ ನ್ಯಾಯಾಲಯಕ್ಕೆ ಪ್ರವೇಶಿಸದೇ ವಕೀಲರ ಮುಖಾಂತರ ತಮ್ಮ ಸಲಹೆ ಪಡೆದುಕೊಳ್ಳಬೇಕು. ಅಲ್ಲದೇ ಜೂ. 01 ರಿಂದ ಕಾರ್ಯಾರಂಭ ಮಾಡಲು ನಿರ್ಧಾರ ಕೈಗೊಂಡಿರುವ ಹಿನ್ನೆಲೆ ಹಲವಾರು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಸ್ಯಾನಿಟೈಸರ್ ಕಾರ್ಯ ಮಾಡಲಾಗುತ್ತದೆ.
ಇನ್ನು ಧಾರವಾಡದ ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳು ಕೂಡ ಜೂ. 01ರಂದು ಕಾರ್ಯಾರಂಭ ಮಾಡಲಿದೆ. ನ್ಯಾಯಾಲಯಕ್ಕೆ ಆಗಮಿಸುತ್ತಿದ್ದಂತೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಮಾಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದೆ.