ETV Bharat / city

ಹುಬ್ಬಳ್ಳಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ತಮ್ಮ; ಪ್ರಿಯಕರನ ಜೊತೆ ಸೇರಿ ಕೊಲೆಗೈದ ಅಕ್ಕ - ಅನೈತಿಕ ಸಂಬಂಧಕ್ಕೆ ಸಹೋದರನ ಕೊಂದ ಅಕ್ಕ

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಸಹೋದರನನ್ನು ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಕೊಲೆ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾಳೆ.

ಪ್ರಿಯಕರನ ಜೊತೆ ಸೇರಿ ಕೊಲೆಗೈದ ಅಕ್ಕ
ಪ್ರಿಯಕರನ ಜೊತೆ ಸೇರಿ ಕೊಲೆಗೈದ ಅಕ್ಕ
author img

By

Published : May 16, 2022, 10:34 AM IST

ಹುಬ್ಬಳ್ಳಿ: ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು 24 ಗಂಟೆಯಲ್ಲಿ ಬೇಧಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಸಹೋದರಿಯೇ ತನ್ನ ಪ್ರಿಯಕರನ ಜೊತೆ ಸೇರಿ ತಮ್ಮನನ್ನು ಕೊಲೆ ಮಾಡಿರುವುದು ಬಹಿರಂಗವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲೇ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಶಂಭುಲಿಂಗ ಕಮಡೊಳ್ಳಿ
ಕೊಲೆಯಾದ ಶಂಭುಲಿಂಗ ಕಮಡೊಳ್ಳಿ

ಅನೈತಿಕ ಸಂಬಂಧಕ್ಕೆ ಸಹೋದರ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಸಹೋದರಿ ಬಸವ್ವ ನರಸಣ್ಣವರ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ ಮರೆಪ್ಪಗೌಡರ ಸೇರಿಕೊಂಡು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದರು. ಪೊಲೀಸರಿಗೆ ಸಂಶಯ ಬಾರದಿರಲಿ ಎಂದು ಸಹೋದರಿ ಸಹೋದರನ ಶವದ ಎದುರು ಕುಳಿತು ಕಣ್ಣೀರು ಹಾಕಿ ನಾಟಕವಾಡಿದ್ದರು.

ಆದ್ರೆ ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಅನೈತಿಕ‌ ಸಂಬಂಧಕ್ಕೆ ಅಡ್ಡಿ ಮಾಡಿದ್ದರಿಂದ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳಾದ ಬಸವ್ವ ಹಾಗೂ ಚನ್ನಪ್ಪ ಮರೆಪ್ಪಗೌಡರನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ: ಪತಿ ಜೊತೆಗಿನ ಜಗಳದಿಂದ ಬೇಸತ್ತು 65 ಕಿ.ಮೀ ನಡೆದುಬಂದ ಗರ್ಭಿಣಿ, ಹೆಣ್ಣು ಮಗುವಿಗೆ ಜನ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.