ETV Bharat / city

ಹುಬ್ಬಳ್ಳಿಯಲ್ಲಿ ಮಳೆ ತಂದ ಅವಾಂತರ: ತಹಶಿಲ್ದಾರ್​ ಕೊಠಡಿ, ದೇವಾಲಯ ಜಲಾವೃತ - ಪುನರ್ವಸತಿ ಕೇಂದ್ರ

ಹುಬ್ಬಳ್ಳಿಯಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಒಂದೆಡೆ ತಹಶಿಲ್ದಾರ್​ ಕಚೇರಿಯ ದಾಖಲಾತಿ ಕೊಠಡಿಯೇ ಜಲಾವೃತವಾಗಿ ಗೋಡೆ ಕುಸಿದಿದ್ದರೆ, ಇನ್ನೊಂದೆಡೆ ಕಲಘಟಗಿ- ಮುಂಡಗೋಡ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬೆಲವಂತರದ ಸೇತುವೆ ಬಳಿಯ ಕೃಷ್ಣ ದೇವಸ್ಥಾನ ನೀರಿನಲ್ಲಿದೆ.

ಹುಬ್ಬಳ್ಳಿಯಲ್ಲಿ ಮಳೆ ತಂದ ಅವಾಂತರ
author img

By

Published : Aug 8, 2019, 11:44 PM IST

ಹುಬ್ಬಳ್ಳಿ: ಮಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಸಮಸ್ಯೆಗೆ ನಿರಂತರವಾಗಿ ಸ್ಪಂದಿಸುತ್ತಿರುವ ತಹಶಿಲ್ದಾರ್​ ಕಚೇರಿಯ ದಾಖಲಾತಿ ಕೊಠಡಿಯೇ ಜಲಾವೃತವಾಗಿ ಗೋಡೆ ಕುಸಿದಿದೆ.

ಕಚೇರಿಯ ಅಭಿಲೇಖಾಲಯ ಕೊಠಡಿ ಪಕ್ಕದಲ್ಲಿರುವ ಗಟಾರು ಬಂದ್​ ಆಗಿ ಗೋಡೆ ಪಕ್ಕದಲ್ಲಿ ಬಹಳಷ್ಟು ನೀರು ಸಂಗ್ರಹವಾಗಿ, ಕೊಠಡಿಯಲ್ಲಿನ ಕಲ್ಲಿನಿಂದ ನೀರು ಆಗಮಿಸಿ ಇಡೀ ಕೊಠಡಿ ಜಲಾವೃತವಾಗಿದೆ. ಸ್ಟ್ಯಾಂಡ್​ನಲ್ಲಿ ದಾಖಲಾತಿಗಳನ್ನು ಇಟ್ಟಿರುವುದರಿಂದ ಕಡತಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಅಲ್ಲದೇ ನಗರದ ಮಿನಿ ವಿಧಾನಸೌಧದಲ್ಲಿ ನೀರಿನ ಸೆಲೆ ಅಲ್ಲಿನ ಸಿಬ್ಬಂದಿಗೆ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಮಿನಿ ವಿಧಾನಸೌಧದ ನೆಲ ಮಹಡಿಯಲ್ಲಿರುವ ನೆಹರು ಯುವ ಕೇಂದ್ರ, ಅಟಲ್ ಜನಸ್ಪಂದನ ಕೇಂದ್ರ, ಝರಾಕ್ಸ್ ಅಂಗಡಿ ಸೇರಿ ವಿವಿಧ ಅಂಗಡಿಗಳ ಗೋಡೆಗಳಲ್ಲಿ ನೀರು ಹೊಕ್ಕಿದೆ. ಗೋಡೆಗಳು ಮಾತ್ರವಲ್ಲದೇ, ಕಟ್ಟಡದ ಪಿಲ್ಲರ್​ಗಳಲ್ಲಿ ಸಹ ನೀರು ಹರಿಯುತ್ತಿದ್ದು, ಇನ್ನು ಶಿಥಿಲಗೊಂಡಿರುವ ಗೋಡೆಯನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಲು ಮುಂದಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮಳೆ ತಂದ ಅವಾಂತರ

ಒಂದೆಡೆ ಅಪಾಯದ ಮಟ್ಟ ಮೀರಿ ಹಿರೇಹಳ್ಳ ಹಾಗೂ ಬೇಡ್ತಿ ಹಳ್ಳ ಹರಿಯುತ್ತಿರುವದರಿಂದ ಕಲಘಟಗಿ- ಮುಂಡಗೋಡ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇನ್ನೊಂದೆಡೆ ಬೆಲವಂತರದ ಸೇತುವೆ ಬಳಿಯ ಕೃಷ್ಣ ದೇವಸ್ಥಾನವು ಜಲಾವೃತವಾಗಿದೆ. ಇನ್ನು ಹುಬ್ಬಳ್ಳಿ ‌ತಾಲೂಕಿನ ಇಂಗಹಳ್ಳಿ ಹಾಗೂ ಶಿಶುವಿನಹಳ್ಳಿ ಮಧ್ಯದ ಬೆಣ್ಣಿಹಳ್ಳದ ಬ್ರಿಡ್ಜ್​ನಲ್ಲಿ ಸಿಲುಕಿಕೊಂಡಿದ್ದ 15 ಜನ ಕಾರ್ಮಿಕರನ್ನು ಬೋಟ್ ಮೂಲಕ ರಕ್ಷಿಸಲಾಗಿದೆ.

ತಹಶಿಲ್ದಾರ್​ ಸಂಗಪ್ಪ ಬಾಡಗಿ ಸ್ಥಳದಲ್ಲಿಯೇ ಇದ್ದು, ರಕ್ಷಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಂಡರು. ಬೆಣ್ಣಿ ಹಳ್ಳ ಹಾಗೂ ತುಪ್ಪರಿಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಿರೆಸೂರು ಹಾಗೂ ಹೆಬಸೂರು ಗ್ರಾಮದ 60 ಕುಟುಂಬಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದಲ್ಲದೆ, ಮುಂಜಾಗ್ರತಾ ಕ್ರಮವಾಗಿ ಮಂಟೂರು ಹಾಗೂ ಶಿರಗುಪ್ಪಿ ಗ್ರಾಮದ 35 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

Hubli  flood
ಪುನರ್ವಸತಿ ಕೇಂದ್ರ

ನವಲುಗುಂದ ತಾಲೂಕಿನ ಅಹಟ್ಟಿ, ಶಿರೂರ, ಮೊರಬ, ಹಣಸಿ, ಗುಮ್ಮಗಿಳ್, ಬ್ಯಾಳಾಳ್, ಅಲಗವಾಡಿ, ಅರಕುಣಿಹಟ್ಟಿ ಹಳ್ಳಿಗಳಲ್ಲಿ ನೆರೆಹಾವಳಿಗೆ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಕಿರೆಸೂರು, ಹೆಬಸೂರು, ಬಂಡಿವಾಡ ಗ್ರಾಮಗಳಲ್ಲೂ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 130 ಕುಟುಂಬಗಳ 900 ಜನರು ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪುನರ್ವಸತಿ ಕೇಂದ್ರ ತೆರೆಯಲಾಗಿದ್ದು, ಗಾಮನಗಟ್ಟೆ ಪ್ರಾಥಮಿಕ ಶಾಲೆಯಲ್ಲಿ 20 ಜನ, ಅಮರಗೋಳ ಅಂಗನವಾಡಿ ಕೇಂದ್ರದಲ್ಲಿ 30 ಜನ, ದೇವಿನಗರದ ಬನಶಂಕರಿ ‌ದೇವಸ್ಥಾನದಲ್ಲಿ 50 ಜನ, ನವ ಅಯೋಧ್ಯಾ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ 20 ಜನ, ಚನ್ನಪೇಟೆಯ GUS ಕಲ್ಯಾಣ ಮಂಟಪದಲ್ಲಿ 15 ಜನ, ಮಾದಾರ ಓಣಿ ಜಾತಿ ಮಠದಲ್ಲಿ 30 ಜನ, ಶ್ರೀನಗರ ಪರಿಸರ ಭವನದಲ್ಲಿ 200 ಜನರಿದ್ದಾರೆ.

Intro:ಹುಬ್ಬಳಿBody:ಸ್ಲಗ್: ಪಾಲಿಕೆ ಕಚೇರಿಗೆ ನುಗ್ಗಿದ ನೀರು ಗೋಡೆ ಕುಸಿತ...

ಹುಬ್ಬಳ್ಳಿ:- ಮಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಸಮಸ್ಯೆಗೆ ನಿರಂತರವಾಗಿ ಸ್ಪಂದಿಸುತ್ತಿರುವ ತಹಶಿಲ್ದಾರರ ಕಚೇರಿಯ ದಾಖಲಾತಿ ಕೊಠಡಿಯೇ ಜಲಾವೃತವಾಗಿ ಗೋಡೆ ಕುಸಿದಿದೆ.
ಕಚೇರಿಯ ಅಭಿಲೇಖಾಲಯ ಕೊಠಡಿ ಪಕ್ಕದಲ್ಲಿರುವ ಗಟಾರು ಬಂದಾಗಿ ಗೋಡೆ ಪಕ್ಕದಲ್ಲಿ ಬಹಳಷ್ಟು ನೀರು ಸಂಗ್ರಹವಾಗಿ ಕೊಠಡಿಯಲ್ಲಿನ ಕಲ್ಲಿನಿಂದ ನೀರು ಆಗಮಿಸಿ ಇಡೀ ಕೊಠಡಿ ಜಲಾವೃತವಾಗಿದೆ. ಸ್ಟ್ಯಾಂಡ್ ನಲ್ಲಿ ದಾಖಲಾತಿಗಳನ್ನು ಇಟ್ಟಿರುವುದರಿಂದ ಕಡತಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.ಅಲ್ಲದೇ ನಗರದ ಮಿನಿ ವಿಧಾನಸೌಧದಲ್ಲಿ ನೀರಿನ ಸೆಲೆ ಅಲ್ಲಿನ ಸಿಬ್ಬಂದಿಗೆ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಮಿನಿ ವಿಧಾನಸೌಧದ ನೆಲ ಮಹಡಿಯಲ್ಲಿರುವ ನೆಹರು ಯುವ ಕೇಂದ್ರ, ಅಟಲ್ ಜನಸ್ಪಂದನ ಕೇಂದ್ರ, ಝರಾಕ್ಸ್ ಅಂಗಡಿ ಸೇರಿ ವಿವಿಧ ಅಂಗಡಿಗಳ ಗೋಡೆಗಳಲ್ಲಿ ಸೆಲೆ ಉದ್ಭವಿಸಿ ನೀರು ಹರಿಯುತ್ತಿದೆ. ಗೋಡೆಗಳು ಮಾತ್ರವಲ್ಲದೇ, ಕಟ್ಟಡದ ಪಿಲ್ಲರ್ ಗಳಲ್ಲಿ ಸಹ ನೀರು ಹರಿಯುತ್ತಿದ್ದು,ಇನ್ನು ಶೀಥಿಲಗೊಂಡಿರುವ ಗೋಡೆಯನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಲು ಮುಂದಾಗಿದ್ದಾರೆ.....

_________________________

ಹುಬ್ಬಳ್ಳಿ; ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.