ಹುಬ್ಬಳ್ಳಿ: ಕೊರೊನಾ ಹಿನ್ನೆಲೆಯಲ್ಲಿ ಸರ್ವಧರ್ಮ ಆಧ್ಯಾತ್ಮಿಕ ಗುರು ಮುಖ್ದೂಮ್ ಆಶ್ರಫ್ ಸಿಮ್ ನಾನಿಯವರ 634 ನೇ ಉರಸು ಹಬ್ಬವನ್ನು ಸರಳವಾಗಿ ಆಚರಣೆ ಮಾಡಲು ನಿರ್ಧರಿಲಾಗಿದೆ ಎಂದು ಮಖ್ದೂಮ್ ಅಶ್ರಫ್ ಅಕಾಡೆಮಿ ಸದಸ್ಯ ಹಾಫಿಜ ಶಾರಿಕ್ ಅಹ್ಮದ್ ಪಟೇಲ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶ ಅಂಬೇಡ್ಕರ್ ನಗರ ಜಿಲ್ಲೆಯ ಕಿಛೊಛಾ ಪ್ರದೇಶದಲ್ಲಿರುವ ಸೂಫಿ ಸಂತ ಸರ್ವಧರ್ಮ ಆಧ್ಯಾತ್ಮಿಕ ಗುರು ಹಜರತ್ ಸುಲ್ತಾನ್ ಅರ್ಶಪ್ ಜಹಾಂಗೀರ್ ಸಿಮ್ ನಾನಿ ಅಲೈವರ ದರ್ಗಾ ಉರಸುನ್ನು ಈ ಬಾರಿ ಕೊರೊನಾ ಇರುವುದರಿಂದ ಅತಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ಈ ದರ್ಗಾಕ್ಕೆ ಎಲ್ಲಾ ಸಮಾಜದವರು ಆಗಮಿಸುತ್ತಾರೆ. ಆದ್ದರಿಂದ ಎಲ್ಲಾ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಇದೆ ಸಂದರ್ಭದಲ್ಲಿ ಅವರ ಆತ್ಮಚರಿತ್ರೆ ಹೊಂದಿರುವ ಪುಸ್ತಕವನ್ನು ಬಿಡುಗಡೆ ಮಾಡಿದರು.