ETV Bharat / city

ಹುಬ್ಬಳ್ಳಿಯಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಅನಿಲ ಸೋರಿಕೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

author img

By

Published : Nov 11, 2021, 1:21 PM IST

Updated : Nov 11, 2021, 3:33 PM IST

ಒಳಚರಂಡಿ ದುರಸ್ತಿ ವೇಳೆ ಗ್ಯಾಸ್‌ ಪೈಪ್‌ ಲೈನ್‌ ಒಡೆದು ಅನಿಲ ಸೋರಿಕೆಯಾಗುತ್ತಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸ್ಥಳೀಯರು ಕೂಡಲೇ ಈ ಬಗ್ಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದರೂ ಈವರೆಗೆ ಯಾರೂ ಸ್ಥಳಕ್ಕೆ ಬಂದಿಲ್ಲ.

Gas leakage in Hubli; Increased tension for locals
ಹುಬ್ಬಳ್ಳಿಯಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಅನಿಲ ಸೋರಿಕೆ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಹುಬ್ಬಳ್ಳಿ: ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆಯಾಗಿರುವ ಘಟನೆ ಸುಳ್ಳದ ರಸ್ತೆಯ ತ್ರಿಬಿ ಹೋಟೆಲ್‌ ಮುಂಭಾಗದಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಅನಿಲ ಸೋರಿಕೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಮಹಾನಗರ ಪಾಲಿಕೆಯವರು ಒಳಚರಂಡಿ ದುರಸ್ತಿ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಜೆಸಿಬಿಯಿಂದ ಅಂದಾಜು 4.5 ಅಡಿ ಆಳದಲ್ಲಿ ಅಗೆಯುವಾಗ ಗ್ಯಾಸ್ ಪೈಪ್​ಗೆ ತಾಗಿ ಒಡೆದು ಹೋಗಿದೆ. ಪೈಪ್ ಒಡೆದಿದ್ದರಿಂದ ಅನಿಲ ಸೋರಿಕೆಯಾಗುತ್ತಿದೆ.

ಕೂಡಲೇ ಸ್ಥಳೀಯರು ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ, ಈವರೆಗೆ ಯಾರೂ ಕೂಡ ಸ್ಥಳಕ್ಕೆ ಆಗಮಿಸಿಲ್ಲ. ಅನಿಲ ಸೋರಿಕೆಯಿಂದ ಅಕ್ಕ-ಪಕ್ಕದ ಮನೆಯವರಲ್ಲಿ ಆತಂಕ ಸೃಷ್ಟಿಯಾಗಿದೆ.

ಇನ್ನು, ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆ ಆಗುತ್ತಿರುವ ವಿಡಿಯೋ ವೈರಲ್ ಆಗಿದೆ. ಗ್ಯಾಸ್ ಪೈಪ್‌ಲೈನ್ ಹಾನಿಯಾದ ಹಿನ್ನೆಲೆ ಇನ್ನಷ್ಟು ಆಳದಲ್ಲಿ‌ ಪೈಪ್‌ಲೈನ್‌ ಅಳವಡಿಕೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

Last Updated : Nov 11, 2021, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.