ETV Bharat / city

ಮಗುವಿನೊಂದಿಗೆ ಪರಾರಿಯಾಗಿದ್ದ ಪತಿರಾಯ: ಮರಳಿ ತಾಯಿಯ ಮಡಿಲು ಸೇರಿದ ಕಂದಮ್ಮ - Mother gets back her baby

ಹೆಂಡತಿಗೆ ಮೋಸ ಮಾಡಿ, ಮಗುವಿನೊಂದಿಗೆ ಪತಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಇದೀಗ ಪೊಲೀಸರು ಮಗುವನ್ನು ಕರೆತಂದು ತಾಯಿಯ ಮಡಿಲು ಸೇರಿಸಿದ್ದಾರೆ.

ಮರಳಿ ತಾಯಿಯ ಮಡಿಲು ಸೇರಿದ ಕಂದಮ್ಮ
author img

By

Published : Sep 5, 2019, 3:00 PM IST

ಧಾರವಾಡ: ಪತಿರಾಯ, ತನ್ನ ಮಗುವನ್ನು ತೆಗೆದುಕೊಂಡು ಹೋದನೆಂದು ಕಣ್ಣೀರು ಹಾಕುತ್ತಿದ್ದ ತಾಯಿ ಈಗ ನಿಟ್ಟುಸಿರು ಬಿಟ್ಟಿದ್ದಾಳೆ. ನಾನಾ ರೀತಿಯ ಹರಸಾಹಸದ ಬಳಿಕ ಮಗು ತನ್ನ ತಾಯಿಯ ಮಡಿಲು ಸೇರಿಕೊಂಡಿದೆ.

ಹೌದು, ಮೂಲತಃ ಧಾರವಾಡದ ನಿವಾಸಿಯಾದ ಮಹಿಳೆಯೊಬ್ಬರು ಕಳೆದ ಕೆಲ ದಿನಗಳ ಹಿಂದೆ ತನ್ನ ಪತಿ ಝಯೀನ್ ಅಡ್ಡೆವಾಲೆ, ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಆ ಮಗು ನನಗೇ ಬೇಕು ಎಂದು ಕಣ್ಣೀರು ಹಾಕುತ್ತಾ ಪತಿಯ ಮನೆಯ ಎದುರು ಪ್ರತಿಭಟನೆ ಕೂಡಾ ನಡೆಸಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈಗ ಝಯೀನ್ ಕುಟುಂಬವನ್ನು ಪತ್ತೆ ಮಾಡಿ ಮಗುವನ್ನು ಕರೆತಂದು ತಾಯಿಯ ಮಡಿಲು ಸೇರಿಸಿದ್ದಾರೆ.

ಮರಳಿ ತಾಯಿಯ ಮಡಿಲು ಸೇರಿದ ಕಂದಮ್ಮ

ಫೇಸ್​​ಬುಕ್​​ನಲ್ಲಿ ಲವ್​​... ಮದುವೆ ಬಳಿಕ ಮಗುವಿನೊಂದಿಗೆ ಗಂಡ ಪರಾರಿ!

ಘಟನೆ ಹಿನ್ನೆಲೆ:

ಫೇಸ್​ಬುಕ್​​ನಲ್ಲಿ ಪರಿಚಯವಾದ ಝಯೀನ್ ಅಡ್ಡೆವಾಲೆ ಎಂಬಾತನನ್ನ ಪ್ರೀತಿಸಿ, ಕೆಲಸವಿಲ್ಲದೆ ತಿರುಗುತ್ತಿದ್ದ ಆತನಿಗೆ ಕೈ ತುಂಬಾ ಸಂಬಳ ಬರುವ ಕೆಲಸಾನೂ ಕೊಡಿಸಿ ಮದುವೆನೂ ಆಗಿದ್ದಳು. ಆದರೆ ಮದವೆಯಾಗಿ ಮಗುವಾದ ಬಳಿಕ ಆತನ ಅಸಲಿ ಮುಖ ಬಯಲಾಗಿತ್ತು. ಆಕೆಗೆ ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದ ಝಯೀನ್​ಗೆ ಈ ಹಿಂದೆಯೇ ಎರಡು ಮದುವೆಯಾಗಿದೆ ಎಂಬ ವಿಷಯವೂ ಬೆಳಕಿಗೆ ಬಂದಿತ್ತು. ಬಳಿಕ ಆತ ಮಗುವನ್ನು ತೆಗೆದುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.

ಒಟ್ಟಾರೆ ಫೇಸ್​ಬುಕ್​​ ಮೂಲಕ ಶುರುವಾದ ಪ್ರೀತಿ ಈ ರೀತಿ ಯುವತಿ ಬದುಕಿಗೆ ಮುಳ್ಳಾಗಿತ್ತು. ಇದೀಗ ಮಗು ತನ್ನ ತಾಯಿಯ ಮಡಿಲು ಸೇರಿದ್ದು, ಮಗುವನ್ನು ಮುದ್ದಾಡುತ್ತಾ ತಾಯಿ ನೋವನ್ನು ಮರೆಯುತ್ತಿದ್ದಾಳೆ.

Intro:ಧಾರವಾಡ: ಪತಿರಾಯ ತನ್ನ ಮಗುವನ್ನು ತೆಗೆದುಕೊಂಡು ಹೋದನೆಂದು ಕಣ್ಣೀರು ಹಾಕುತ್ತಿದ್ದ ತಾಯಿ. ಮಗು ಬೇಕು ಎಂದು ತಾಯಿಯ ನಾನಾ ರೀತಿಯ ಹರಸಾಹಸದ ಬಳಿಕ ಮಗು ತಾಯಿಯ ಮಡಿಲು ಸೇರಿಕೊಂಡಿದೆ.

ಹೌದು ಮೂಲತಃ ಧಾರವಾಡದ ನಿವಾಸಿಯಾಗಿರುವ ರಾಬಿಯಾ ಎಂಬ ಯುವತಿ ಕಳೆದ ಕೆಲ ದಿನಗಳ ಹಿಂದೆ ತನ್ನ ಪತಿ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಆ ಮಗು ನನಗೇ ಬೇಕು ಎಂದು ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ದಳು ಹಾಗೂ ಪತಿಯ ಮನೆಯ ಎದುರು ಪ್ರತಿಭಟನೆ ಕೂಡಾ ನಡೆಸಿದ್ದಳು.

ಪೇಸ್ ಬುಕ್ ಮೂಲಕ ಪ್ರೀತಿ ಮಾಡಿ ಝಯೀನ್ ಅಡ್ಡೆವಾಲೆ ಎಂಬಾತನನ್ನ ಮದುವೆ ಮಾಡಿಕೊಂಡಿದ್ದ ರಾಬಿಯಾನನ್ನು‌ ಬಿಟ್ಟು ಎಂಟು ತಿಂಗಳ ಮಗುವಿನೊಂದಿಗೆ ಝಯೀನ್ ಪರಾರಿಯಾಗಿದ್ದ. ಮಗುವಿನೊಂದಿಗೆ ಪರಾರಿಯಾದ ಗಂಡನ ವಿರುದ್ದ ಪೊಲೀಸ್ ಠಾಣೆಗೆ ದೂರು ಸಹ ದಾಖಲಿಸಿದ್ದಳು.

Body:ಪ್ರಕರಣ ದಾಖಲಿಸಿಕೊಂಡ ಪೊಲೀಸರು ಝಯೀನ್ ಕುಟುಂಬವನ್ನು ಪತ್ತೆ ಮಾಡಿ ಮಗುವನ್ನು ತಾಯಿಯ ಮಡಿಲು ಸೇರಿಸಿದ್ದಾರೆ. ಪೊಲೀಸರ ಸಹಾಯದಿಂದ ತಾಯಿಯ ಮಡಿಕು ಸೇರಿದ ಮಗು ತಾಯಿಯೊಂದಿಗೆ ಆಶ್ರಯ ಪಡೆಯುತ್ತಿದೆ.

ಆದ್ರೆ ಮಗುವೇನೋ ತಾಯಿಯ ಮಡಿಲಲ್ಲಿದೆ ಇದೀಗ ರಾಬಿಯಾ ಗಂಡನ ತಂದೆ ಮಗು ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.