ಹುಬ್ಬಳ್ಳಿ: ಅಂತೂ ಇಂತೂ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇದೀಗ ನೆಟ್ಟ ಸಸಿಗಳಿಗೆ ನೀರು ಹಾಕುವ ಮೂಲಕ ನಿರ್ವಹಣೆ ಮಾಡುತ್ತಿದೆ.
ಬೇಸಿಗೆ ಸಮಯದಲ್ಲಿ ನೆಟ್ಟಿದ್ದ ಸಸಿಗಳು ನೀರು ಹಾಗೂ ನಿರ್ವಹಣೆ ಇಲ್ಲದೆ ಅಳಿವಿನಂಚಿಗೆ ತಲುಪಿದ್ದವು. ಈ ಹಿನ್ನಲೆಯಲ್ಲಿ ಈ ಟಿವಿ ಭಾರತ 'ತಾನೇ ನೆಟ್ಟ ಸಸಿಗಳು ಬಾಡಿ ಹೋಗಿತ್ತಿದ್ದರೂ ಪಾಲಿಕೆ ಡೊಂಟ್ ಕೇರ್' ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಭಿತ್ತರಿಸಿತ್ತು ವರದಿಗೆ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಸಿಬ್ಬಂದಿ ಸಸಿಗಳಿಗೆ ನೀರು ಹಾಕುವ ಮೂಲಕ ನಿರ್ವಹಣೆ ಮಾಡುತ್ತಿದೆ.
ಮಹಾನಗರ ಪಾಲಿಕೆ ಈಟಿವಿ ಭಾರತ ವರದಿಗೆ ಎಚ್ಚೆತ್ತುಕೊಂಡು ಸಸಿಗಳ ನಿರ್ವಹಣೆಯತ್ತ ಗಮನ ಹರಿಸಿದೆ. ನಗರದ ಸೌಂದರ್ಯ ಹಾಗೂ ಸಸ್ಯ ಸಂಪತ್ತನ್ನು ವೃದ್ಧಿಸುವ ಸದುದ್ದೇಶದಿಂದ ಸಸಿಗಳನ್ನು ನೆಡಲಾಗಿತ್ತು.
ಆದರೆ ಸಸಿ ನೆಟ್ಟಿ ಕೈ ತೊಳೆದುಕೊಂಡಿದ್ದ ಮಹಾನಗರ ಪಾಲಿಕೆ ಸಸಿಗಳ ನಿರ್ವಹಣೆ ಬಗ್ಗೆ ನಿಷ್ಕಾಳಜಿ ತೋರಿತ್ತು ವರದಿಗೆ ಹು-ಧಾ ಮಹಾನಗರ ಪಾಲಿಕೆ ಸ್ಪಂದಿಸುವ ಮೂಲಕ ಸಸಿಗಳ ರಕ್ಷಣೆಯತ್ತ ಗಮನ ಹರಿಸಿರುವದರಿಂದ ಸಾರ್ವಜನಿಕರು ಮೆಚ್ಚುಗೆ ಜೊತೆಗೆ ಅಭಿನಂದನೆ ಸಲ್ಲಿಸಿದ್ದಾರೆ.