ಹುಬ್ಬಳ್ಳಿ: ಇಲ್ಲಿನ ದುರ್ಗದ ಬೈಲ್‌ನಲ್ಲಿ ಹೊಳೆಯುವ ಕಲ್ಲುಗಳನ್ನು(Shiny stones) ತಂದು ಇದರಲ್ಲಿ ಬಂಗಾರ (Gold) ಇದೆ ಎಂದು ಸುಳ್ಳು ಹೇಳಿ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿತನಿಂದ 1.35 ಲಕ್ಷ ರೂ. ಮೌಲ್ಯದ 1039 ಗ್ರಾಂ ತೂಕದ 9 ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಪ್ಪಳದ ವಿದ್ಯಾನಗರ ನಿವಾಸಿ ಮೌನೇಶ ಶಿವಪ್ಪಅರ್ಕಾಚಾರಿ ಬಂಧಿತ ಆರೋಪಿ.
ಇಲೆಕ್ಟ್ರಿಕ್ ಕೆಲಸ ಮಾಡಿಕೊಂಡಿರುವ ಮೌನೇಶ, ದುರ್ಗದ ಬೈಲ್‌ಗೆ ಬಂದಿದ್ದರು. ಹೊಳೆಯುವ ಕಲ್ಲುಗಳನ್ನು ತಂದು ಇದರಲ್ಲಿ ಬಂಗಾರ (Gold) , ಬೆಳ್ಳಿ (Silver) ಇದೆ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಇನ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.
ಇದು ಕ್ಯಾಲಿಫೋರ್ನಿಯಂ:
ಆ ಕಲ್ಲನ್ನು ಆರೋಪಿ ‘ಕ್ಯಾಲಿಫೋರ್ನಿಯಂ’(Californium) ಎಂದು ಹೇಳುತ್ತಿದ್ದರು. ಈ ವಿಚಾರ ತಿಳಿದ ಪೊಲೀಸರು ಆಯುಕ್ತರು, ಅದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ ಅಂದರೆ ವಿಕಿರಣ ಸೂಸುವ ವಸ್ತು (Californium is a radioactive chemical element) ಅದನ್ನು ಬರಿಗೈಲಿ ಮುಟ್ಟಬೇಡಿ. ಮರಳಿನಲ್ಲಿ ಮುಚ್ಚಿ ಇಡಿ ಎಂದು ಸಿಬ್ಬಂದಿಗೆ ಸೂಚಿಸಿದ್ದರು.
1 ಗ್ರಾಂಗೆ 17 ಕೋಟಿ ರೂ.:
ಕ್ಯಾಲಿಫೋರ್ನಿಯಂ (Californium) ಎಂಬುದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ ಅಂದರೆ ವಿಕಿರಣ ಸೂಸುವ ವಸ್ತು (Radioactive chemical element). ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣ ಶೀಲ ಲೋಹ. ಇದು ಯುರೇನಿಯಂ (Uranium) ನಂತರ ಅತಿ ಹೆಚ್ಚು ಪರಮಾಣು (Nuclear Number) ಸಂಖ್ಯೆಯನ್ನು ಹೊಂದಿದೆ. ಈ ಕಾರಣಗಳಿಗಾಗಿ ಮಾರುಕಟ್ಟೆಯ ಮೌಲ್ಯ (Market Value) ಹೆಚ್ಚಾಗಿದೆ.
ಇದನ್ನು ಬರಿಗೈಲಿ ಮುಟ್ಟಿದರೆ ಕ್ಯಾನ್ಸರ್ನಂಥ (Cancer) ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಬರಿಗಣ್ಣಿನಿಂದ ನೋಡಿದರೆ ದೃಷ್ಟಿ ಹೀನತೆ (Loss of vision) ಆಗುವ ಸಾಧ್ಯತೆ ಇದೆ.
1950ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಲಾರೆನ್ಸ್ ರ್ಬಕೆಲಿ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ (Lawrence Berkeley National Laboratory) ಇದನ್ನು ಸಂಶೋಧಿಸಲಾಗಿತ್ತು. ಹಾಗಾಗಿ, ಇದಕ್ಕೆ ಕ್ಯಾಲಿಪೋರ್ನಿಯಂ (Californium) ಎಂದು ನಾಮಕರಣ ಮಾಡಲಾಗಿದೆ. 1 ಗ್ರಾಂ ಕ್ಯಾಲಿಫೋರ್ನಿಯಂ ಬೆಲೆ ಬರೋಬ್ಬರಿ 17 ಕೋಟಿ ರೂ. ಎನ್ನಲಾಗುತ್ತಿದೆ.
ಕ್ವಾರಿಯಲ್ಲಿ ಸಿಕ್ಕ ಕಲ್ಲುಗಳು:
ಕೊಪ್ಪಳದ ಕ್ವಾರಿಯೊಂದರಲ್ಲಿ ಈ ಹೊಳೆಯುವ ಕಲ್ಲುಗಳು(Shiny stone) ಸಿಕ್ಕಿದ್ದವು ಎಂದು ಮೌನೇಶ ಹೇಳಿದ್ದಾರೆ. ಶಹರ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಚಿನ್ನ ಸಾಗಾಟ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಹಿಳಾ ಕ್ಯಾಬಿನ್ ಸಿಬ್ಬಂದಿ ಬಂಧನ