ETV Bharat / city

ಬಿಜೆಪಿ ಜೊತೆಗೆ ಕೈ ಜೋಡಿಸುವುದು ಅಸಾಧ್ಯ: ಅನೀಲ್​ ಕುಮಾರ್​ ಪಾಟೀಲ - Hubli Municipality

ನವಲಗುಂದ ಪುರಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾಂಗ್ರೆಸ್ಸಿಗೆ ಬೇಷರತ್ತಾಗಿ ಬೆಂಬಲ ನೀಡಿದ್ದರ ಬಗ್ಗೆ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲ್ ಕುಮಾರ್​ ಪಾಟೀಲ ಮಾತಾನಾಡಿ ನಮಗೆ ಬಯಸದೇ ಬಂದ ಭಾಗ್ಯವಿದು ಎಂದಿದ್ದಾರೆ.

Anil Kumar Patil
ಅನೀಲ್​ ಕುಮಾರ್​ ಪಾಟೀಲ
author img

By

Published : Nov 4, 2020, 10:37 PM IST

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಯಾವುದೇ ಸಂದರ್ಭದಲ್ಲಿ ಕೂಡ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರ ಇಲ್ಲ. ಪುರಸಭೆ ಚುನಾವಣೆಯಲ್ಲಿ ‌ನೀಡಿರುವ ಬೆಂಬಲ ಬಯಸದೆ ಬಂದ ಭಾಗ್ಯ ಎಂದು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲ್ ಕುಮಾರ್​ ಪಾಟೀಲ ಹೇಳಿದರು.

ನಗರದರಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನವಲಗುಂದ ಪುರಸಭೆ ಚುನಾವಣೆ ಹಿನ್ನೆಲೆಯಲ್ಲೆ ಪುರಸಭೆಯ ಚುನಾವಣೆಯ ಪೂರ್ವದಲ್ಲಿ ನವಲಗುಂದದ ಹಿರಿಯ ಕಾಂಗ್ರೆಸ್ಸಿಗರು ಭಾರತೀಯ ಜನತಾ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎಂಬ ಮಾಹಿತಿಯಿದೆ. ಇದರ ಬಗ್ಗೆ ಸಮಗ್ರವಾಗಿ ವಿಚಾರಣೆ ನಡೆಸಿ ಮಾಹಿತಿಯನ್ನ ಕೆಪಿಸಿಸಿಗೆ ಕಳಿಸಲಾಗುವುದು ಎಂದರು.

ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲ್ ಕುಮಾರ್​ ಪಾಟೀಲ

ನವಲಗುಂದ ಪುರಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾಂಗ್ರೆಸ್ಸಿಗೆ ಬೇಷರತ್ತಾಗಿ ಬೆಂಬಲ ನೀಡಿದ್ದರ ಬಗ್ಗೆ ಮಾತಾನಾಡಿ ನಮಗೆ ಬಯಸದೇ ಬಂದ ಭಾಗ್ಯವಿದು. ಅಧ್ಯಕ್ಷ-ಉಪಾಧ್ಯಕ್ಷರು ಯುವಕರಿದ್ದು ಉತ್ತಮವಾಗಿ ಕಾರ್ಯವನ್ನ ನಡೆಸಲಿದ್ದಾರೆ. ಪಟ್ಟಣದ ಅಭಿವೃದ್ಧಿಗಾಗಿ ಶ್ರಮ ವಹಿಸಲಿದ್ದಾರೆಂದು ಹೇಳಿದರು.

ಭಾರತೀಯ ಜನತಾ ಪಕ್ಷದ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ, ಕೆಲವು ಹಿರಿಯ ಕಾಂಗ್ರೆಸ್ಸಿಗರು ಆ ಥರದ ಪ್ರಯತ್ನವನ್ನ ಮಾಡಿದ್ದರು. ಹಾಗಾಗಿಯೇ ಆ ಬಗ್ಗೆ ಸಮಗ್ರ ಮಾಹಿತಿಯನ್ನ ತೆಗೆದು ಕೆಪಿಸಿಸಿಗೆ ಕಳಿಸಲಾಗುವುದು ಎಂದು ಪಾಟೀಲ ಹೇಳಿದರು.

ಪುರಸಭೆಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಇಷ್ಟೊಂದು ಜಿದ್ದಾಜಿದ್ದಿಗೆ ಬಿದ್ದು ಕೊನೆಗಳಿಗೆಯಲ್ಲಿ ಕಾಂಗ್ರೆಸ್​ಗೆ ಬಯಸದೇ ಬಂದ ಭಾಗ್ಯ ಎಂದು ಹೇಳುವಂತಾಗಿದೆ. ನವಲಗುಂದ ಕ್ಷೇತ್ರದಲ್ಲಿ ಕೊನೆಗೂ ಜೆಡಿಎಸ್ ಅಧಿಕಾರದಿಂದ ದೂರ ಉಳಿಯುವಂತೆ ನೋಡಿಕೊಂಡಿದ್ದು ಮಾತ್ರ ಎಲ್ಲರಿಗೂ ಗೊತ್ತಿರುವ ವಿಚಾರ ಹೀಗಾಗಿ ಬಿಜೆಪಿಗೆ ಬೇಷರತ್​ ಬೆಂಬಲ ನೀಡಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.