ಧಾರವಾಡ : ಜಿಲ್ಲೆ ಹಾಗೂ ರಾಜ್ಯಮಟ್ಟದ ಖಾಲಿ ಗಾಡಿ ಓಟದಲ್ಲಿ ಅಜೇಯನಾಗಿ ಮಿಂಚಿದ ಎತ್ತಿನ ಹುಟ್ಟು ಹಬ್ಬ ಆಚರಿಸುವ ಮೂಲಕ ರೈತನೋರ್ವ ಕೃತಜ್ಞತಾಭಾವ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದ ಕಲ್ಲಪ್ಪ ತೇಗೂರು ಎತ್ತಿನ ಹುಟ್ಟು ಹಬ್ಬ ಆಚರಿಸಿದ ರೈತ. ಮನೆಯ ಮುಂದೆ ಕೇಕ್ ಕತ್ತರಿಸುವ ಮೂಲಕ 'ಸೋಲಿಲ್ಲದ ಸರದಾರ' ಗೆಳೆಯನ ಬರ್ತ್‌ಡೇ ಆಚರಿಸಲಾಯಿತು. ಈ ಎತ್ತು ಜಿಲ್ಲೆ ಹಾಗೂ ಅಂತರ ಜಿಲ್ಲೆ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಅಲ್ಲದೆ, ಹಾನಗಲ್ ತಾಲೂಕಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, ಹುಲಿಕಟ್ಟಿ ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮಾಲೀಕನಿಗೆ ನಗದು ಹಾಗೂ ಚಿನ್ನದ ಬಹುಮಾನ ತಂದುಕೊಟ್ಟಿದೆ. ಮನುಷ್ಯನ ಹುಟ್ಟು ಹಬ್ಬ ಕೊಂಡಾಡುವ ರೀತಿ ಬೆಳ್ಳಿಗಟ್ಟಿ ಗ್ರಾಮದ ಜನರೆಲ್ಲ ಸೇರಿ ಎತ್ತನ್ನು ಸಿಂಗರಿಸಿ, ಕೇಕ್ ಕಟ್ ಮಾಡುವ ಮೂಲಕ ಅದ್ದೂರಿಯಾಗಿ ಜನ್ಮ ದಿನ ಆಚರಿಸಿದರು.