ಹುಬ್ಬಳ್ಳಿ: ಚರಂಡಿ ಅಗಲೀಕರಣ ನೆಪದಲ್ಲಿ ಅಧಿಕಾರಿಗಳು ನೇಕಾರ ನಗರದ ಸಿಂದೆ ಕಾಲೋನಿ ನಿವಾಸಿಗಳ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.
ಕಾಲೋನಿಯಲ್ಲಿ ಹಾದುಹೋಗಿರುವ ಚರಂಡಿ ನೀರಿನ ಗಟರ್ ಇಲ್ಲಿನ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಚರಂಡಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಅಗಲೀಕರಣಕ್ಕೆ 5 ಲಕ್ಷ ರೂ. ಹಣ ನೀಡಿ ಇಲ್ಲವೇ, ಮನೆ ಖಾಲಿ ಮಾಡಿ ಎಂದು ಅಧಿಕಾರಿಯೊಬ್ಬರು ಬೆದರಿಕೆ ಹಾಕುತ್ತಿದ್ದಾರೆಂದು ಇಲ್ಲಿನ ನಿವಾಸಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ.
ಓದಿ: ಗಟ್ಟಿ ಧ್ವನಿಯಲ್ಲಿ ಉತ್ತರ ಕೊಟ್ಟಿದ್ದಕ್ಕೆ ಹಿಂದೆ ಸರಿಯುವ ಪರಿಸ್ಥಿತಿ ಬಂದಿದೆ: ಸಚಿವ ಮಾಧುಸ್ವಾಮಿ
ಚರಂಡಿ ನೆಪವೊಡ್ಡಿ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿರುವುದು ಎಷ್ಟರಮಟ್ಟಿಗೆ ಸರಿ? ಈಗಿರುವ ಜಾಗದಲ್ಲೇ ಚರಂಡಿ ನಿರ್ಮಿಸಿದರೆ, ಯಾರಿಗೂ ತೊಂದರೆ ಆಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳದಿದ್ದರೆ, ಹೋರಾಟ ನಡೆಸಲಾವುದು ಎಂದು ಎಚ್ಚರಿಕೆ ನೀಡಿದ್ದಾರೆ.