ಹುಬ್ಬಳ್ಳಿ: ಬೋರ್ವೆಲ್ ಸ್ಟಾರ್ಟರ್‌ನಿಂದ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಜಗದೀಶ್ ಕಲ್ಲಯ್ ಹಿರೇಮಠ (28) ಮೃತ ಯುವಕ. ತಮ್ಮ ಹೊಲದಲ್ಲಿ ವಿದ್ಯುತ್ ಬೋರ್ವೆಲ್ ಆನ್ ಮಾಡಲು ಹೋದಾಗ ಕೈಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಕಲಘಟಗಿ ಠಾಣೆ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಬಿರಾದರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.