ETV Bharat / city

ಕೋವಿಡ್​​ ಅಪಾಯ ಭತ್ಯೆ ತಾರತಮ್ಯ ಆರೋಪ: ದಾದಿಯರ ಸಂಘದಿಂದ ಪ್ರತಿಭಟನೆ ಎಚ್ಚರಿಕೆ - covid risk allowance,

ನರ್ಸ್​ಗಳು ತಮ್ಮ ಜೀವದ ಹಂಗನ್ನು ತೊರೆದು ಸೋಂಕಿತರ ಆರೈಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ದಾದಿಯರಿಗೆ ಅಪಾಯ ಭತ್ಯೆ ಕೊಡಲು ಸರ್ಕಾರ ನಿರ್ಧರಿಸಿದೆ. ಮಾಸಿಕ 8 ಸಾವಿರದಂತೆ 6 ತಿಂಗಳವರೆಗೆ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿ, ಕಳೆದ ವಾರ ಸುತ್ತೋಲೆ ಹೊರಡಿಸಿದೆ. ಆದರೆ, ಕೋವಿಡ್ ವಾರ್ಡ್‌ನಲ್ಲಿ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸಿದ ನರ್ಸ್​ಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ.

covid-risk-allowance-allegation-protest-warning-from-the-nurses-union
ದಾದಿಯರ ಸಂಘ
author img

By

Published : Jun 3, 2021, 4:47 PM IST

ಹುಬ್ಬಳ್ಳಿ: ಕೊರೊನಾ ಫ್ರಂಟ್‌ಲೈನ್ ವಾರಿಯರ್ಸ್‌ಆಗಿ ಕೆಲಸ ನಿರ್ವಹಿಸುತ್ತಿರುವ ನರ್ಸ್‌ಗಳಿಗೆ ಸರ್ಕಾರ 'ಕೋವಿಡ್​​ ಅಪಾಯ ಭತ್ಯೆ' (ರಿಸ್ಕ್ ಅಲೊವೆನ್ಸ್) ಕೊಡಲು ನಿರ್ಧರಿಸಿದೆ. ಆದರೆ, ಇದರಲ್ಲಿ ಪಿಪಿಐ ಕಿಟ್ ಹಾಕಿಕೊಂಡು ಕೆಲಸ ಮಾಡಿದ ದಾದಿಯರಿಗೆ ಮಾತ್ರ ಈ ಸೌಲಭ್ಯ ಒದಗಿಸಲು ಮುಂದಾಗಿರುವುದು ದಾದಿಯರ ಸಂಘದ ಕೆಂಗಣ್ಣಿಗೆ ಗುರಿಯಾಗಿದೆ.

ಕೋವಿಡ್​​ ಅಪಾಯ ಭತ್ಯೆ ತಾರತಮ್ಯ ಆರೋಪ

ಕೊರೊನಾ ವಿರುದ್ಧದ ಹೋರಾಟದಲ್ಲಿ ಹಂಗು ತೊರೆದು ಹೋರಾಡಿದವರ ಪೈಕಿ ವೈದ್ಯರನ್ನ ಹೊರತುಪಡಿಸಿದರೆ ನಂತರದ ಸ್ಥಾನ ದಾದಿಯರದ್ದೇ. ನರ್ಸ್​ಗಳು ತಮ್ಮ ಜೀವನದ ಹಂಗನ್ನು ತೊರೆದು ಸೋಂಕಿತರ ಆರೈಕೆ ಮಾಡುತ್ತಿದ್ದಾರೆ. ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ದಾದಿಯರಿಗೆ ಅಪಾಯ ಭತ್ಯೆ ಕೊಡಲು ನಿರ್ಧರಿಸಿದೆ. ಮಾಸಿಕ 8 ಸಾವಿರದಂತೆ 6 ತಿಂಗಳವರೆಗೆ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿ, ಕಳೆದ ವಾರ ಸುತ್ತೋಲೆ ಹೊರಡಿಸಿದೆ. ಆದರೆ, ಕೋವಿಡ್ ವಾರ್ಡ್‌ನಲ್ಲಿ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸಿದ ನರ್ಸ್​ಗಳಿಗೆ ಇದು ಅನ್ವಯವಾಗುತ್ತದೆ.

ಸದ್ಯ ಇದರಿಂದ ಬೇಸತ್ತ ದಾದಿಯರ ಸಂಘ, ಕೊರೊನಾ ಎರಡನೆಯ ಅಲೆಯಲ್ಲಿ ರಾಜ್ಯದ ಪ್ರತಿಯೊಂದು ಆಸತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಆಸ್ಪತ್ರೆ ಸಾಲದ್ದಕ್ಕೆ ಬೇರೆ ಬೇರೆ ಸಂಘ ಸಂಸ್ಥೆಗಳ ನೆರವಿನೊಂದಿಗೆ ಕೋವಿಡ್ ಕೇರ್‌ ಕೇಂದ್ರಗಳನ್ನು ತೆರೆಯಲಾಗಿದೆ. ಹೀಗಾಗಿ, ಪ್ರತಿಯೊಬ್ಬ ನರ್ಸ್‌ಗಳಿಗೆ ಅಪಾಯ ಭತ್ಯೆ ನೀಡಬೇಕು ಎಂದು ನರ್ಸ್‌ಗಳು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಬರೋಬ್ಬರಿ 19,500ಕ್ಕೂ ಹೆಚ್ಚು ನರ್ಸ್‌ಗಳಿದ್ದಾರೆ. ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 11 ಸಾವಿರ, ವೈದ್ಯಕೀಯ ಶಿಕ್ಷಣ ಇಲಾಖೆಗೊಳಪಟ್ಟ 4 ಸಾವಿರ ನರ್ಸ್‌ಗಳಿದ್ದಾರೆ. ಇನ್ನೂ 4500 ದಾದಿಯರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲರಿಗೂ ಭತ್ಯೆ, ಕೊಡಬೇಕೆಂಬ ಆಗ್ರಹ ಈಗ ಕೇಳಿ ಬಂದಿದೆ.

ಸದ್ಯ, ಸಂಘವು ರಿಸ್ಕ್ ಅಲೊವೆನ್ಸ್ ಕುರಿತು ಕಳೆದ ವಾರ ಹೊರಡಿಸಿರುವ ಆದೇಶವನ್ನು ಹಿಂಪಡೆಬೇಕು. ಮತ್ತೊಂದು ಆದೇಶವನ್ನು ಹೊರಡಿಸಬೇಕು ಎಂದು ಒತ್ತಾಯಿಸಿದೆ. ಒಂದು ವೇಳೆ ಸರ್ಕಾರ ಹೊರಡಿಸದಿದ್ದಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಸಹ ದಾದಿಯರ ಸಂಘ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.