ಹುಬ್ಬಳ್ಳಿ: ಮಕ್ಕಳು ಕಾಲೇಜಿಗೆ ಹೋಗಿ ವಿದ್ಯೆ ಕಲಿತು ಬರಲಿ ಅಂತಾ ಪೋಷಕರು ಕಳುಹಿಸಿದರೆ, ಮಕ್ಕಳು ಮಾತ್ರ ಮಾಡಬಾರದ್ದನ್ನು ಸಾರ್ವಜನಿಕರ ಮುಂದೆಯೇ ಮಾಡುತ್ತಾ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ.
ಹೌದು, ಅಂತಹ ಘಟನೆಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನ. ಇಲ್ಲಿ ಹೇಳೋರು ಇಲ್ಲ, ಕೇಳೋರು ಇಲ್ಲ ಎಂಬಂತಾಗಿದ್ದು. ಯುವ ಪ್ರೇಮಿಗಳಿಬ್ಬರು ಮುತ್ತಿನ ಗಮ್ಮತ್ತಿನಲ್ಲಿ ತಮ್ಮನ್ನೇ ತಾವು ಮರೆತಿದ್ದಾರೆ.
ಅಲ್ಲೇ ಇದ್ದ ಸಾರ್ವಜನಿಕರಿಗೆ ಈ ವರ್ತನೆಯಿಂದ ಮುಜುಗುರ ಉಂಟಾಗಿದೆ. ಈ ರೀತಿಯಾಗಿ ಹಾಡಹಗಲೇ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಲು ಕಾರಣವಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ