ಧಾರವಾಡ: ನಗರದಲ್ಲಿ ಸೋಂಕಿತ ವ್ಯಕ್ತಿ ಪತ್ತೆಯಾದ ಕಾರಣ ಧಾರವಾಡದ ಹೊಸ ಯಲ್ಲಾಪುರ ಪ್ರದೇಶದಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯ ಮುಂದುವರಿದಿದೆ.
![Corona Positive](https://etvbharatimages.akamaized.net/etvbharat/prod-images/kn-dwd-3-chemical-spray-av-ka10001_23032020115415_2303f_1584944655_163.jpg)
ಬೆಳಗ್ಗೆ 10 ಗಂಟೆಯವರೆಗೆ ಸ್ತಬ್ಧವಾಗಿದ್ದ ಧಾರವಾಡ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕೆಲ ಹೋಟೆಲ್ ಅಂಗಡಿ ಮುಂಗಟ್ಟುಗಳು ಆರಂಭವಾಗಿದೆ. ಎಂದಿನಂತೆ ಜನಸಂಚಾರ ಕೂಡ ಶುರುವಾಗಿದೆ. ಧಾರವಾಡದಲ್ಲಿ ಕೊರೊನಾ ವೈರಸ್ ಹಬ್ಬುತ್ತಿದ್ದರು ಸಹ ಜನರು ಏನು ಆಗಲ್ಲಾ ಎಂಬಂತೆ ಜನರು ಆಗಮಿಸುತ್ತಿದ್ದಾರೆ. ಧಾರವಾಡದ ಪ್ರಮುಖ ಬೀದಿಗಳಿಗೂ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ.
ಇನ್ನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಪಹಾರ ಹಾಗೂ ಊಟ ವಿತರಿಸುವ ಕೆಲಸ ಮಾಡಲಾಗುತ್ತಿದೆ.
![Corona Positive](https://etvbharatimages.akamaized.net/etvbharat/prod-images/kn-dwd-3-chemical-spray-av-ka10001_23032020115415_2303f_1584944655_351.jpg)
ಆರೋಗ್ಯ ಇಲಾಖೆಯಿಂದ ಚೆಕ್ ಪೋಸ್ಟ್ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಸಹ ಮುಂದುವರಿದಿದೆ. ಕೊರೊನಾ ವೈರಸ್ ಹಬ್ಬುತ್ತಿರುವ ಕಾರಣ ಜಿಲ್ಲಾಡಳಿತ ಸಹ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.