ETV Bharat / city

ಬಳಸದ ಐಸೋಲೇಟೆಡ್ ಬೋಗಿಗಳನ್ನು 'ಶ್ರಮಿಕ್ ಎಕ್ಸ್‌ಪ್ರೆಸ್' ಆಗಿ ಪರಿವರ್ತನೆ..

author img

By

Published : Jun 13, 2020, 10:02 PM IST

ಐಸೋಲೇಟೆಡ್ ವಾರ್ಡ್​​ಗಳಾಗಿ ಬದಲಾಯಿಸಿದ್ದ ರೈಲ್ವೆ ಕೋಚ್​​​​ಗಳನ್ನು 'ಶ್ರಮಿಕ್ ಎಕ್ಸ್‌ಪ್ರೆಸ್'‌ ಆಗಿ ಪರಿವರ್ತನೆ ಮಾಡಲಾಗಿದೆ.

convert-isolated-bogies-to-shramik-express
'ಶ್ರಮಿಕ್ ಎಕ್ಸ್‌ಪ್ರೆಸ್

ಹುಬ್ಬಳ್ಳಿ : ಐಸೋಲೇಟೆಡ್ ವಾರ್ಡ್​​ಗಳಾಗಿ ಮಾರ್ಪಾಡು ಮಾಡಲಾಗಿದ್ದ ರೈಲ್ವೆ ಕೋಚ್​​​ಗಳು ಈವರೆಗೂ ಬಳಕೆಯಾಗದ ಕಾರಣ ಅವುಗಳನ್ನು ಶ್ರಮಿಕ್​​ ಎಕ್ಸ್​​​ಪ್ರೆಸ್ ಆಗಿ ಬದಲಾಯಿಸಲಾಗಿದೆ.

ಕೊರೊನಾ ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ನೈರುತ್ಯ ರೈಲ್ವೆ ಇಲಾಖೆ, 312 ಬೋಗಿಗಳನ್ನು ಐಸೋಲೇಷನ್ ವಾರ್ಡ್ (ಪ್ರತ್ಯೇಕ ವಾರ್ಡ್‌) ಮತ್ತು ತೀವ್ರ ನಿಗಾ ಘಟಕಗಳಾಗಿ (ಐಸಿಯು) ಪರಿವರ್ತಿಸಿತ್ತು.

ಐಸೋಲೇಟೆಡ್ ಬೋಗಿಗಳನ್ನು 'ಶ್ರಮಿಕ್ ಎಕ್ಸ್‌ಪ್ರೆಸ್'‌ ಆಗಿ ಪರಿವರ್ತನೆ

ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 2,496 ಮಂದಿ ಐಸೊಲೇಷನ್ ಬೋಗಿಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿತ್ತು. ಸದ್ಯ ಸೋಂಕಿತರಿಗೆ ರಾಜ್ಯದ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಹೀಗಾಗಿ ಐಸೋಲೇಷನ್ ಬೋಗಿಗಳಿಗೆ ಈವರೆಗೂ ಬೇಡಿಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳನ್ನು ಪುನರ್ ಪರಿವರ್ತಿಸಿ ಶ್ರಮಿಕ್​​​ ಎಕ್ಸ್‌ಪ್ರೆಸ್‌ ಆಗಿ ಬದಲಾವಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.