ETV Bharat / city

ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ, ಆರ್ಥಿಕತೆ ಸುಧಾರಿಸಲು ಎರಡು ವರ್ಷ ಬೇಕು: ಎಂ ಬಿ ಪಾಟೀಲ

author img

By

Published : Aug 20, 2022, 7:22 PM IST

ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಶೇ.40ರಷ್ಟು ಕಮಿಷನ್​ ಬಗ್ಗೆ ಪ್ರಧಾನಿ ಮೋದಿಯವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಯಾಕೆ ಐಟಿ, ಇಡಿ ದಾಳಿ ಮಾಡಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.

congress-leader-mb-patil-slams-state-government-in-hubballi
ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ, ಆರ್ಥಿಕತೆ ಸುಧಾರಿಸಲು ಎರಡು ವರ್ಷ ಬೇಕು: ಎಂಬಿ ಪಾಟೀಲ್

ಹುಬ್ಬಳ್ಳಿ: ಉತ್ತರ ಪ್ರದೇಶ, ಬಿಹಾರ ಜನ ನಮ್ಮ ರಾಜ್ಯಕ್ಕೆ ದುಡಿಯೋಕೆ ಬರುತ್ತಾರೆ. ಮೆಡಿಕಲ್, ಇಂಜಿನಿಯರಿಂಗ್ ಓದಲು ಕೂಡ ನಮ್ಮ ರಾಜ್ಯಕ್ಕೆ ಬರುತ್ತಾರೆ. ಆದರೆ, ನಮ್ಮ ಮುಖ್ಯಮಂತ್ರಿಗಳಿಗೆ ಉತ್ತರ ಪ್ರದೇಶದ ಮಾಡೆಲ್ ​ಬೇಕಂತೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹರಿಹಾಯ್ದರು.

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸ್ವಾತಂತ್ರ್ಯದ ದಿನದ ಭಾಷಣದಲ್ಲಿ ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರುತ್ತೇವೆ ಅಂತಾರೆ. ಆದರೆ, ಇತ್ತ ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಶೇ.40ರಷ್ಟು ಕಮಿಷನ್​ ಬಗ್ಗೆ ಮೋದಿಯವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಯಾಕೆ ಐಟಿ, ಇಡಿ ದಾಳಿ ಮಾಡಲ್ಲ ಎಂದು ಪ್ರಶ್ನಿಸಿದರು.

ಅಲ್ಲದೇ, ರಾಜ್ಯದಲ್ಲಿ ಸರ್ಕಾರವಿಲ್ಲ ಅಂತಾ ಅವರ ಸಂಪುಟ ಸಚಿವರೇ ಹೇಳುತ್ತಾರೆ. ಮ್ಯಾನೇಜ್ ಮಾಡುತ್ತೇವೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈ ಸರ್ಕಾರದ ವಿರುದ್ಧ ನಾವು ಜನರ ಮನೆ-ಮನೆಗೆ ಹೋಗಿ ತಿಳಿಸುತ್ತೇವೆ. 140 ರಿಂದ 150 ಸ್ಥಾನಗಳನ್ನು ಪಡೆದು ನಾವು ಅಧಿಕಾರಕ್ಕೆ ಮತ್ತೆ ಬರುತ್ತೇವೆ. ನಾವು ಅಧಿಕಾರಕ್ಕೆ ಬಂದರೂ ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ, ಕೆಟ್ಟ ಆರ್ಥಿಕತೆ ಸುಧಾರಿಸಲು ಎರಡು ವರ್ಷ ಬೇಕು. ಮತ್ತೆ ರಾಜ್ಯವನ್ನು ನಂಬರ್ ಓನ್ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಂ ಬಿ ಪಾಟೀಲ ಹೇಳಿದರು.

ಈ ಬಾರಿ ವೀರಶೈವ ಲಿಂಗಾಯತಕ್ಕೆ ಒಳಪಡುವ ಎಲ್ಲ ಪಂಗಡಗಳನ್ನು ಒಟ್ಟುಗೂಡಿಸಿ ಹೋರಾಟ ಮಾಡಲು ಚಿಂತನೆ ನಡೆದಿದೆ. ಚುನಾವಣೆ ಬಳಿಕ ಎಲ್ಲಾ ಮಠಾಧೀಶರು ಮತ್ತು ವಿರಕ್ತ ಮಠ ಹಾಗೂ ಪಂಚ ಪೀಠಾಧಿಪತಿಗಳ ಜೊತೆಗೆ ಮಾತುಕತೆ ನಡೆಸುತ್ತೇವೆ. ನಮ್ಮ ಸಮಾಜಕ್ಕೆ ಅಲ್ಪಸಂಖ್ಯಾತ ಮನ್ನಣೆ ಸಿಗಬೇಕು. ನಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಹೆಚ್ಚಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ತಿಳಿಸಿದರು.

ಇದೇ ವೇಳೆ ಸಾವರ್ಕರ್ ಭಾವಚಿತ್ರವನ್ನು ಸುಟ್ಟಿರುವುದು ತಪ್ಪು. ಅದೇ ರೀತಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆಯನ್ನು ಎಸೆದಿದ್ದು ಚಿಲ್ಲರೆ ಕೆಲಸ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಬಗ್ಗೆ ಟೀಕೆ ಮಾಡಿ ನಾನೇಕೆ ಹಗುರ ಆಗಲಿ.. ಬಿ ಎಸ್ ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.