ETV Bharat / city

ಗಾಂಧಿ ನಗರದ ಓಂ ಪ್ರದೇಶ ಸಂಪೂರ್ಣ ಸೀಲ್‍ಡೌನ್:  ಧಾರವಾಡ ಡಿಸಿ ಆದೇಶ - ನಗರದ ಗಾಂಧಿ ನಗರದ ಓಂನಗರ

ಗಾಂಧಿನಗರದ ಓಂ ನಗರದಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಆ ಪ್ರದೇಶವನ್ನು ಸಂಪೂರ್ಣ ಸೀಲ್‍ಡೌನ್ ಮಾಡಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶಿಸಿದ್ದಾರೆ.

Om urban area of ​​Gandhi city, complete sealeddown, Dharwad DC order
ಗಾಂಧಿ ನಗರದ ಓಂ ನಗರ ಪ್ರದೇಶ ಸಂಪೂರ್ಣ ಸೀಲ್‍ಡೌನ್, ಧಾರವಾಡ ಡಿಸಿ ಆದೇಶ
author img

By

Published : May 16, 2020, 11:47 PM IST

ಧಾರವಾಡ: ನಗರದ ಗಾಂಧಿ ನಗರದ ಓಂ -ನಗರದಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಆ ಪ್ರದೇಶದ ಸೋಂಕಿತನ ಮನೆಯಿಂದ 100 ಮೀಟರ್ ಅಂತರದವರೆಗಿನ ಪ್ರದೇಶವನ್ನು ತಕ್ಷಣದಿಂದ ಮುಂದಿನ ಆದೇಶದವರೆಗೆ ನಿಯಂತ್ರಿತ ವಲಯವೆಂದು ಘೋಷಿಸಿ ಸಂಪೂರ್ಣ ಪ್ರದೇಶವನ್ನು ಸೀಲ್‍ಡೌನ್ ಮಾಡಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶಿಸಿದ್ದಾರೆ.

ನಿಯಂತ್ರಿತ ವಲಯದ ಸುತ್ತ ಇರುವ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್‍ ಎಂದು ಘೋಷಿಸಿ ಕೊವಿಡ್-19 ಸೋಂಕು ಹರಡದಂತೆ ತಡೆಯಲು ಸದಾ ಕಣ್ಗಾವಲು ಮತ್ತು ಸಾಮಾಜಿಕ ಅಂತರದ ಕ್ರಮಗಳು ಜಾರಿ ಇರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನಿಯಂತ್ರಿತ ವಲಯದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯವರು ಆಹಾರ ಮತ್ತು ಇತರ ಸೇವೆಗಳನ್ನು ಜನರಿಗೆ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.