ಧಾರವಾಡ: ಅನ್ನದಾತರ ಅನುಕೂಲಕ್ಕಾಗಿ ಜಾರಿಗೊಳಿಸಿದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಬೆಳೆವಿಮೆ ಪಡೆದಿದ್ದ 9 ಜನರ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಮನಗುಂಡಿ ಗ್ರಾಮದ ಸರ್ವೇ ನಂಬರ್ 48ರ ಸರ್ಕಾರದ ಗೋಮಾಳ ಜಾಗದಲ್ಲಿ ಬೆಳೆ ಬೆಳೆದಿದ್ದೇವೆ ಎಂದು 13 ಜನ ಬೆಳೆ ವಿಮೆ ತುಂಬಿ ಎರಡು ವರ್ಷದಿಂದ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಕಳೆದ ಆಗಸ್ಟ್ 17 ರಂದು 'ಈಟಿವಿ ಭಾರತ' ವರದಿ ಪ್ರಕಟಿಸಿತ್ತು.
ಇದನ್ನು ಓದಿ: ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ದುರುಪಯೋಗ : ಸರ್ಕಾರಿ ಜಾಗದಲ್ಲಿ ಬೆಳೆವಿಮೆ ತುಂಬಿ ವಂಚನೆ
'ಈಟಿವಿ ಭಾರತ' ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಸೂಕ್ತ ತನಿಖೆ ನಡೆಸುವಂತೆ ಕೃಷಿ ಇಲಾಖೆಗೆ ಸೂಚಿಸಿದ್ದರು. ಇದೀಗ ಕೃಷಿ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ 9 ಜನರ ವಿರುದ್ಧ ದೂರು ದಾಖಲಾಗಿದೆ.