ETV Bharat / city

'ಅಮ್ಮಂದಿರ ಲಾಕ್‌ಡೌನ್ ಕಥೆ' ನಟನೆ ಮುಖಾಂತರ ಬಿಚ್ಚಿಟ್ಟ ಉತ್ತರಕರ್ನಾಟಕದ ಕುವರಿ!!

ಲಾಕ್​ಡೌನ್​ ಸಮಯದಲ್ಲಿ ಅಮ್ಮಂದಿರ ಫಜೀತಿಯ ಕಥೆಯನ್ನು ತನ್ನ ನಟನೆಯ ಮೂಲಕ ಬಿಚ್ಚಿಟ್ಟಿರುವ ಹುಬ್ಬಳ್ಳಿಯ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜತೆಗೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ..

comedy-video-of-mothers-situation-in-lockdown-time
ಅಮ್ಮಂದಿರ ಲಾಕ್ ಡೌನ್ ಕಥೆ
author img

By

Published : Jul 4, 2020, 9:34 PM IST

ಹುಬ್ಬಳ್ಳಿ : ಕೊರೊನಾ ಭೀತಿ ಹಿನ್ನೆಲೆ ದೇಶವನ್ನೇ ಲಾಕ್‌ಡೌನ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಎಲ್ಲಾ ಅಮ್ಮಂದಿರ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ಬಾಲಕಿಯೊಬ್ಬಳು ಸವಿಸ್ತಾರವಾಗಿ ನಟನೆ ಮುಖಾಂತರ ಬಿಚ್ಚಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹುಬ್ಬಳ್ಳಿಯ ಪ್ರಭಾ ಸಿಂಗ್ ಎಂಬುವರ ಮುದ್ದಿನ ಮಗಳು ಆಕಾಂಕ್ಷ ಸಿಂಗ್ ಎಂಬ ಬಾಲಕಿ ಲಾಕ್‌ಡೌನ್​​ಲ್ಲಿ ಅಮ್ಮಂದಿರು ಸೀರಿಯಲ್ ನೋಡಲು, ದೇವರ ದರ್ಶನ ಪಡೆದುಕೊಳ್ಳಲು ಎಷ್ಟು ಕಷ್ಟ ಪಡುತ್ತಾರೆ ಎಂಬುದನ್ನು ನಟನೆ ಮೂಲಕ ತೋರಿಸಿ ಕೊಟ್ಟಿದ್ದಾಳೆ.

'ಅಮ್ಮಂದಿರ ಲಾಕ್‌ಡೌನ್ ಕಥೆ' ನಟನೆ ಮುಖಾಂತರ ಬಿಚ್ಚಿಟ್ಟ ಉತ್ತರ ಕರ್ನಾಟಕದ ಕುವರಿ!!

‌ಈ ವಿಡಿಯೋದಲ್ಲಿ ಒಂದು ಹಾಡು ಸಹ ಕಂಪೋಸ್ ಮಾಡಲಾಗಿದೆ. 'ಚೈನಾದಿಂದ ಹರಡಿ ವೈರಸ್ ದೇಶಕ್ಕೆ ಬಂದೈತಿ, ಈ ವೈರಸ್ ಬಹಳ ಡೇಂಜರ್ ಐತಿ, ಜಾಗೃತಿ ವಹಸಿದ್ರ ನಿಮ್‌ ಪ್ರಾಣ ಉಳಿತೇತಿ' ಎಂಬ ಹಾಡಿಗೆ ನಟನೆ ಮುಖಾಂತರ ಜಾಗೃತಿ ಮೂಡಿಸಿದ್ದಾಳೆ.

ಅಷ್ಟೇ ಅಲ್ಲ, ಇಂಟರ್ನೆಟ್ ಮುಖಾಂತರ ಯೋಗ ಕಲಿಯಲು ಹೋಗಿ ಏನೆಲ್ಲಾ ಫಜೀತಿ ಆಗುತ್ತೇ ಎಂಬುದನ್ನ ಒಬ್ಬಳೆ, ಮೂರು ಪಾತ್ರದಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.