ETV Bharat / city

ಧಾರವಾಡಕ್ಕೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ.. - ಧಾರವಾಡಕ್ಕೆ ನೆರೆ ಅಧ್ಯಯನ ತಂಡ

ಕಳೆದ ನವೆಂಬರ್​ ತಿಂಗಳಿನ‌ ಕೊನೆಯಲ್ಲಿ ಸುರಿದ ಭಾರಿ ಮಳೆಗೆ ಸಾಕಷ್ಟು ಬೆಳೆ ಹಾನಿ ‌ಸಂಭವಿಸಿದೆ. ಹೀಗಾಗಿ, ಧಾರವಾಡ ಜಿಲ್ಲೆಗೆ ಇಂದು ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದೆ..

Central Flood Study Team visits Dharwad
ಧಾರವಾಡಕ್ಕೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ.
author img

By

Published : Dec 17, 2021, 1:01 PM IST

Updated : Dec 17, 2021, 1:20 PM IST

ಹುಬ್ಬಳ್ಳಿ(ಧಾರವಾಡ): ಜಿಲ್ಲೆಗೆ ಇಂದು ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದ್ದು, ಹಾನಿ ಕುರಿತು ಪರಿಶೀಲನೆ ನಡೆಸಲಿದೆ.

ಕಳೆದ ನವೆಂಬರ್​ ತಿಂಗಳಿನ‌ ಕೊನೆಯಲ್ಲಿ ಸುರಿದ ಮಳೆಗೆ ಸಾಕಷ್ಟು ಬೆಳೆ ಹಾನಿ ‌ಸಂಭವಿಸಿದೆ. ಹೀಗಾಗಿ, ಧಾರವಾಡ ಜಿಲ್ಲೆಗೆ ಇಂದು ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದೆ. ನವೆಂಬರ್‌ನಲ್ಲಿ ಮಳೆಯಿಂದ ಉಂಟಾದ ಹಾನಿ ಕುರಿತು ಪರಿಶೀಲಿಸಲಿದೆ. ಬೆಳೆ, ಮನೆ ಮತ್ತು ರಸ್ತೆ ಹಾನಿಯನ್ನು ವೀಕ್ಷಣೆ ಮಾಡಲಿದೆ‌. ಪರಿಶೀಲನೆಗೆೆಂದು ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ತಾಲೂಕುಗಳಿಗೆ ಭೇಟಿ ನೀಡಿ ಕೊಡಲಿದೆ.

ಧಾರವಾಡಕ್ಕೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ

ಕೇಂದ್ರ ನೆರೆ ಅಧ್ಯಯನ ತಂಡದ ಪರಿಶೀಲನೆಗೂ ಮುನ್ನ, ಧಾರವಾಡ ಡಿಸಿ ನಿತೇಶ್ ಪಾಟೀಲ್ ಹಾಗೂ ವಿವಿಧ ಅಧಿಕಾರಿಗಳು ಹುಬ್ಬಳ್ಳಿಯ ಸರ್ಕಿಟ್ ಹೌಸ್​ನಲ್ಲಿ ಕೇಂದ್ರ ಅಧ್ಯಯನ ತಂಡದ ಸದಸ್ಯರಾದ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ ಜೆ ಮತ್ತು ಕೇಂದ್ರ ಸರ್ಕಾರದ ಹಣಕಾಸು ಮಂತ್ರಾಲಯದ ಮಹೇಶ ಕುಮಾರ್‌ ಅವರಿಗೆ ಜಿಲ್ಲೆಯ ಅತಿವೃಷ್ಠಿ( ಮಳೆ ಹಾನಿ) ಹಾನಿ ಕುರಿತು ಫೋಟೋ ಗ್ಯಾಲರಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಇದನ್ನೂ ಓದಿ: ಗಡಿ ಶಾಲೆಗಳಲ್ಲಿ‌ ಸದ್ದಿಲ್ಲದೆ ದಾಖಲಾದ ಕೊರೊನಾ ಸೋಂಕು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ., ಉಪ ವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ಹಾಗೂ ಕೃಷಿ, ತೋಟಗಾರಿಕೆ, ಮಹಾನಗರ ಪಾಲಿಕೆ, ನೀರಾವರಿ, ಲೋಕೋಪಯೋಗಿ, ಪಂಚಾಯತ್​ ರಾಜ್ ಇಂಜಿನಿಯರಿಂಗ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Last Updated : Dec 17, 2021, 1:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.