ಹುಬ್ಬಳ್ಳಿ: ನಗರದ ಗೌಸ್ ಬಾಗ್ ಪ್ರದೇಶದಲ್ಲಿ ಸಿಎಎ ಕಾಯಿದೆ ಜಾರಿ ವಿರೋಧಿಸಿ ಸಂವಿಧಾನ ಸುರಕ್ಷಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ನ್ಯಾಯಯುತ ಹೋರಾಟಕ್ಕೆ ಕೆಲ ಅಧಿಕಾರಿಗಳು ಬಹಿರಂಗವಾಗಿ ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಪಿತಾಂಬ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಕಾಯ್ದೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈಗಾಗಲೇ ನಾವು ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿದ್ದೆವು. ಜೊತೆಗೆ ಪ್ರತಿಭಟನಾ ಸ್ಥಳದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪರವಾನಗಿ ಅನ್ವಯ ಪೆಂಡಾಲ್ ಸೇರಿದಂತೆ ಅಗತ್ಯ ಸಾಮಾಗ್ರಿಗಳಿಗೆ ಶುಲ್ಕ ಸಹ ಭರಿಸಲಾಗಿದೆ. ಆದರೂ ಸಹ ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನೀಡುತಿಲ್ಲ. ಆದರೂ ತಾವು ಮೊದಲು ನಿಗದಿಪಡಿಸಿದ ಸಮಯದಲ್ಲಿ ಅಲ್ಲಿಯೇ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ತಮಗೂ ಸಹ ಮೇಲಿಂದ ಮೇಲೆ ಒತ್ತಡ ಇದ್ದು, ಅವರು ಸಹ ಪರವಾನಗಿ ನೀಡುತಿಲ್ಲ ಎಂದರು. ಇದೇ ಜ. 29ರಂದು ಸಿಎಎ ಕಾಯ್ದೆ ವಿರೋಧಿಸಿ ಬಹುಜನ ಕ್ರಾಂತಿ ಮೋರ್ಚಾ ನೀಡಿದ ಭಾರತ ಬಂದ್ ಕರೆಗೆ ತಮ್ಮ ಸಮಿತಿ ಸಂಪೂರ್ಣ ಬೆಂಬಲ ನೀಡಿದೆ ಎಂದರು.