ಹುಬ್ಬಳ್ಳಿ : ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಡಿ ವೆಂಕಟ್ ಕೊನಂಕಿ ನಿರ್ಮಾಣ ಮಾಡಿರುವ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನತೆಯಿಂದ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಚಿತ್ರದ ನಿರ್ದೇಶಕ ಹರಿ ಸಂತೋಷ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದ ಪ್ರೇಮ ಕಹಾನಿಯನ್ನು ಸಿನಿ ಪ್ರಿಯರು ಮೆಚ್ಚಿದ್ದಾರೆ. ಚಿತ್ರವು ಒಟ್ಟು 4 ಹಾಡುಗಳನ್ನು ಒಳಗೊಂಡಿದ್ದು, ಎಲ್ಲಾ ಹಾಡುಗಳು ಜನಪ್ರಿಯವಾಗಿವೆ ಎಂದು ಹೇಳಿದರು.
ಚಿತ್ರದ ನಾಯಕ ನಟ ಧನ್ವೀರ್ ಮಾತನಾಡಿ, ಈ ಸಿನೆಮಾದಲ್ಲಿ ನಾನು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನಗೊಳ್ಳುತ್ತಿದೆ ಎಂದರು. ಮಾಸ್ ಚಿತ್ರದಿಂದ ಲವರ್ ಬಾಯ್ ಆಗಿ ಅಭಿನಯಿಸಿದ್ದು, ಚಾಲೆಂಗ್ ಅನಿಸಿತು ಎಂದು ಹೇಳಿದರು.
ಚಿತ್ರದ ನಾಯಕಿ ಶ್ರೀಲೀಲಾ ಮಾತನಾಡಿ, ನಾನು ಸಿನೆಮಾದಲ್ಲಿ ಮಲೆನಾಡು ಹುಡ್ಗಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಉತ್ತರ ಕರ್ನಾಟಕದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಓದಿ :ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ 2 ಶತಕ ಸಿಡಿಸಿ ದಾಖಲೆ ಬರೆದ ಯಶ್ ಧುಲ್