ETV Bharat / city

BJP ಕಾರ್ಯಕಾರಿಣಿ: ಶಾಸಕತ್ವ ಹಾಗೂ ಉದ್ಯಮದ ಒತ್ತಡದಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್​​ ಬೆಲ್ಲದ್ ರಾಜೀನಾಮೆ? - ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್​​ ಬೆಲ್ಲದ್ ರಾಜೀನಾಮೆ?

BJP State Executive: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಅನೇಕ ವಿಚಾರಗಳಿಗೆ ಮಹತ್ವ ಪಡೆದುಕೊಂಡಿದ್ದು, ಹುಬ್ಬಳ್ಳಿ – ಧಾರವಾಡ ಮಹಾನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಅರವಿಂದ್​ ಬೆಲ್ಲದ್​ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ.

BJP State Executive
BJP State Executive
author img

By

Published : Dec 29, 2021, 8:01 PM IST

ಹುಬ್ಬಳ್ಳಿ: ಇತ್ತ ಹುಬ್ಬಳ್ಳಿಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನ ಭದ್ರವಾಗಿರುವುದು ಖಾತ್ರಿಯಾದ ಮಧ್ಯೆಯೇ ಅತ್ತ ಧಾರವಾಡದವರಾದ ಶಾಸಕ ಅರವಿಂದ್​ ಬೆಲ್ಲದ್​ ತಮ್ಮ ಹುಬ್ಬಳ್ಳಿ - ಧಾರವಾಡ ಮಹಾನಗರ ಜಿಲ್ಲಾ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.

ದಶಕದ ನಂತರ ವಾಣಿಜ್ಯ ನಗರಿಯಲ್ಲಿ ಮಹತ್ವದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿರುವ ಮಧ್ಯೆಯೇ ಬೆಲ್ಲದ್​​ ಅವರು ತಮ್ಮ ಸ್ಥಾನ ತ್ಯಜಿಸುವುದನ್ನು ಖಚಿತ ಪಡಿಸಿದ್ದು, ಈಗಾಗಲೇ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ. ಬರುವ ಸಂಕ್ರಾತಿಯೊಳಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಬೆಲ್ಲದ್​ ಅವರು ಕಾರ್ಯಕಾರಿಣಿಗೆ ಗೈರು ಹಾಜರಾಗಿದ್ದಾರೆ.

ಕಾರ್ಯಕಾರಿಣಿ ಸಭೆಯಲ್ಲೂ ಈ ವಿಷಯ ಎಲ್ಲೆಡೆ ಚರ್ಚೆಗೂ ಗ್ರಾಸವಾಗಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ಮುನ್ನ ಸಿಎಂ ಆಕಾಂಕ್ಷಿಗಳ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದ ಅರವಿಂದ್​ ಬೆಲ್ಲದ್​ ನಂತರ ನಡೆದ ವಿದ್ಯಮಾನದಿಂದ ಎಲ್ಲವನ್ನೂ ಸಹಿಸಿಕೊಂಡು ಇದೀಗ ಪಕ್ಷದ ಚಟುವಟಿಕೆಗಳಲ್ಲಿ ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ಅಸಹಾಯಕತೆ ನೆಪದಲ್ಲಿ ಸ್ಥಾನ ತ್ಯಜಿಸಲು ಮುಂದಾಗಿರುವದು ಗುಟ್ಟಾಗೇನೂ ಉಳಿದಿಲ್ಲ.

ಈ ಹಿಂದಿನಿಂದಲೂ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಹೆಚ್ಚಾಗಿ ಹುಬ್ಬಳ್ಳಿಯವರ ಪಾಲಿಗೇ ಒಲಿದು ಬಂದಿದೆ. ಒಂದರ್ಥದಲ್ಲಿ ಜಗದೀಶ್​ ಶೆಟ್ಟರ್, ಪ್ರಹ್ಲಾದ್ ಜೋಶಿ ಶಿಷ್ಯರೇ ಈ ಸ್ಥಾನವನ್ನು ಅಧಿಕ ಸಲ ಅಲಂಕರಿಸಿದ್ದಾರೆ. ಆಕಸ್ಮಿಕ ಎಂಬಂತೆ ಅರವಿಂದ್​ ಬೆಲ್ಲದ್​ ಅವರಿಗೆ ಪ್ರಾಪ್ತವಾಗಿದ್ದ ಮಹಾನಗರ ಜಿಲ್ಲಾ ಅಧ್ಯಕ್ಷ ಹುದ್ದೆ ಹುಬ್ಬಳ್ಳಿಯ ಕೆಲವರ ಅಸಹಕಾರದಿಂದ ಬೆಲ್ಲದ್​​ ಅವರಿಗೆ ಈ ಸ್ಥಾನದಲ್ಲಿ ಮುಂದುವರೆಯಲು ಮುಜುಗರಕ್ಕೀಡು ಮಾಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಅತ್ಯಾಚಾರ - ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಚಪ್ಪಲಿ ಎಸೆದ ಅಪರಾಧಿ!

ದೊಡ್ಡ ಉದ್ಯಮಿಯಾಗಿರುವ ಅರವಿಂದ್​ ಬೆಲ್ಲದ್​ ಅವರ ಒಡೆತನದ ಪ್ರತಿಷ್ಠಿತ ವಾಹನಗಳ ಮಾರಾಟ, ಡೀಲರ್​ಶಿಪ್​​ನ ಬೃಹತ್ ಮಳಿಗೆಗಳು ಅವಳಿನಗರದಲ್ಲಿದ್ದು, ಅವುಗಳ ನಿರ್ವಹಣೆಯೂ ಶಾಸಕರ ಮೇಲಿದೆ. ಹೀಗಾಗಿ, ಮೊದಲಿನಿಂದಲೂ ಬಿಜೆಪಿಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಕಡಿಮೆಯಾದ ಹಿನ್ನೆಲೆಯಲ್ಲಿ ಸ್ವತಃ ಬೆಲ್ಲದ್​ ಅವರೇ ಅಧ್ಯಕ್ಷ ಪದವಿಯಿಂದ ವಿಮುಕ್ತಿ ಹೊಂದಲು ಬಯಸಿದ್ದಾರೆಂದು ಹೇಳಲಾಗುತ್ತಿದೆ.

ಬೆಲ್ಲದ್​ ಅವರಿಂದ ತೆರವುಗೊಳ್ಳುವ ಸ್ಥಾನದಲ್ಲಿ ಧಾರವಾಡದಿಂದ ಸಂಜಯ ಕಪಟಕರ್, ಹುಬ್ಬಳ್ಳಿಯ ಮಲ್ಲಿಕಾರ್ಜುನ್​ ಸಾವುಕಾರ, ತಿಪ್ಪಣ್ಣ ಮಜ್ಜಗಿ ಹಾಗೂ ಸಂಘ ಪರಿವಾರದ ದತ್ತಮೂರ್ತಿ ಕುಲಕರ್ಣಿ ಮುಂದಿನ ಮಹಾನಗರ ಜಿಲ್ಲಾ ಅಧ್ಯಕ್ಷರಾಗುವ ಪಟ್ಟಿಯಲ್ಲಿದ್ದು, ಈ ನಾಲ್ವರಲ್ಲಿ ಯಾರಿಗೆ ಸ್ಥಾನ ಒಲಿದು ಬರುತ್ತದೆ ಎಂಬುದು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.