ETV Bharat / city

ನಾವು ಜನರಿಗೆ ಮೋಸ ಮಾಡುತ್ತಿದ್ದೇವೆ.. ಕಾಂಗ್ರೆಸ್​ ಧರಣಿಗೆ ಬಸವರಾಜ ಹೊರಟ್ಟಿ ಅಸಮಾಧಾನ

ಪ್ರತಿಭಟನೆ ವಿಚಾರವಾಗಿ ವಿರೋಧ ಪಕ್ಷದವರ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದೇನೆ. ಇದರ ಬಗ್ಗೆ ಬಹಳಷ್ಟು ನೋವಿದೆ. ಜನರ ಕೋಟ್ಯಂತರ ರೂಪಾಯಿ ಹಣವನ್ನು ವ್ಯರ್ಥ ಮಾಡುತ್ತಿದ್ದೇವೆ..

author img

By

Published : Feb 19, 2022, 4:01 PM IST

Updated : Feb 19, 2022, 4:31 PM IST

basavaraj-horatti
ಬಸವರಾಜ ಹೊರಟ್ಟಿ

ಹುಬ್ಬಳ್ಳಿ : ಸಚಿವ ಕೆ ಎಸ್​ ಈಶ್ವರಪ್ಪ ಅವರ ಕೇಸರಿ ಬಾವುಟ ಹೇಳಿಕೆಯ ವಿರುದ್ಧ ಕಾಂಗ್ರೆಸ್​ ನಡೆಸುತ್ತಿರುವ ಅಹರ್ನಿಶಿ ಪ್ರತಿಭಟನೆಗೆ ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರು ಕೊಡಂಗಿಲ್ಲ ಅಂತಾರೆ, ಕಾಂಗ್ರೆಸ್​ನವರು ಬಿಡಂಗಿಲ್ಲ ಅಂತಾರೆ. ಗಂಡ ಹೆಂಡತಿಯ ಜಗಳದ ಮಧ್ಯೆ ಕೂಸು ಬಡವಾಯ್ತು ಎಂಬಂತೆ ರಾಜ್ಯದ ಜನರ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಧರಣಿಗೆ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿರುವುದು..

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಕರ್ನಾಟಕದ ಜನತೆಗೆ ನಾವು ಅನ್ಯಾಯ‌ ಮಾಡುತ್ತಿದ್ದೇವೆ. ನಾನು ಸಭಾಪತಿಯಾಗಿ ಮಾತನಾಡುತ್ತಿಲ್ಲ. ಸಾಮಾನ್ಯ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ನಾವು ಜನರಿಗೆ ಮೋಸ, ಅವಮಾನ, ಕೆಟ್ಟದು ಮಾಡುತ್ತಿದ್ದೇವೆ ಎಂದರು.

ಪ್ರತಿಭಟನೆ ವಿಚಾರವಾಗಿ ವಿರೋಧ ಪಕ್ಷದವರ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದೇನೆ. ಇದರ ಬಗ್ಗೆ ಬಹಳಷ್ಟು ನೋವಿದೆ. ಜನರ ಕೋಟ್ಯಂತರ ರೂಪಾಯಿ ಹಣವನ್ನು ವ್ಯರ್ಥ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ಸೇರ್ಪಡೆ ವಿಚಾರ : ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿಗೆ ಸೇರುವ ವಿಚಾರವಾಗಿ ಮಾತನಾಡಿ, ಕೇಂದ್ರದ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಇದೆ. ಹೀಗಾಗಿ, ಅವರು ನನ್ನ ಅಷ್ಟು ಕಾಳಜಿ ಮಾಡುತ್ತಾರೆ. ಆದರೆ, ನಾನು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮೇ ತನಕವೂ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದರು.

ಓದಿ: ಸಚಿವ ಕೆ.ಎಸ್.ಈಶ್ವರಪ್ಪ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

Last Updated : Feb 19, 2022, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.