ETV Bharat / city

ಮೇ 18ರ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುವುದಾಗಿ ತಿಳಿಸುವೆ.. ಸಭಾಪತಿ ಬಸವರಾಜ್​ ಹೊರಟ್ಟಿ

ನಾನು ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಿಲ್ಲಲು ತೀರ್ಮಾನ ಮಾಡಿದ್ದೇನೆ. ನಾನು ಮೊದಲು ಗೆದ್ದು ಬಂದಿದ್ದೆ ಸ್ವತಂತ್ರವಾಗಿ, ಆನಂತರ ಪಕ್ಷಗಳಿಂದ ನಿಂತು ಗೆದ್ದು ಬಂದಿದ್ದೇನೆ‌. ರಾಜಕಾರಣದಲ್ಲಿ ಇರುವ ಕಾರಣ ಒಂದು ಪಕ್ಷದಲ್ಲಿ ಇರಬೇಕು. ಶಿಕ್ಷಕರ ಸಮಸ್ಯೆ ಬಂದಾಗ ಅವುಗಳನ್ನು ಪರಿಹಾರಕ್ಕೆ ಸಪೋರ್ಟ್ ಬೇಕಾಗುತ್ತದೆ ಎಂಬ ಕಾರಣಕ್ಕೆ 1983ರಲ್ಲಿ ಶಿಕ್ಷಕರ ಸಂಘದಿಂದ ಟರಾವ್ ಮಾಡಿದ್ದೇವೆ. ಹಾಗಾಗಿ, ಶಿಕ್ಷಕರ ಪ್ರೀತಿ, ವಿಶ್ವಾಸ ಉಳಿಸುಕೊಂಡು ಹೋಗುವ ಕೆಲಸ ಮಾಡುವೆ..

Basavaraj Horatti press meet about council election
ಬಸವರಾಜ್​ ಹೊರಟ್ಟಿ
author img

By

Published : May 15, 2022, 7:10 PM IST

ಹುಬ್ಬಳ್ಳಿ: ನಾನು ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದೇನೆ ಎಂಬುದನ್ನು ಮೇ 18ರ ಬಳಿಕವೇ ಬಹಿರಂಗಗೊಳಿಸುವೆ. ಇದೀಗ ಸಭಾಪತಿ ಸ್ಥಾನದಲ್ಲಿದ್ದುಕೊಂಡು ಚುನಾವಣೆ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಸರ್ಕಾರದ ಅಧಿಕಾರವನ್ನು ದುರುಪಯೋಗ ಮಾಡಿದ ಹಾಗೇ ಆಗಲಿದೆ. ಬೆಳಗಾವಿ ಅಧಿವೇಶನದ ನಂತರದಲ್ಲಿ ಬ್ಯುಜಿ ಇದ್ದೆ. ಹೀಗಾಗಿ, ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿಲ್ಲ.

ಆದರೆ, ನನ್ನ ಪರವಾಗಿ ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳು ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಈಗಾಗಲೇ 18 ಸಾವಿರ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕೆಲಸ ಮಾಡಿದ್ದೇವೆ ಎಂದರು.

ಮೇ 18ರ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುವುದಾಗಿ ತಿಳಿಸುವೆ ಎಂದಿರುವ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ..

ಈವರೆಗೆ ಸಾಧನೆ ಮಾಡಿದ ಕುರಿತು ಪುಸ್ತಕದ ರೂಪದಲ್ಲಿ ಮತದಾರರಿಗೆ ತಿಳಿ ಹೇಳುವ ಕೆಲಸ ಆಗುತ್ತಿದೆ. ನನ್ನ ಚುನಾವಣೆಯನ್ನು ರಾಜಕೀಯ ಪಕ್ಷಕ್ಕಿಂತ ಶಿಕ್ಷಕರ ಸಂಘಟನೆಗಳೇ ಹೆಚ್ಚು ತಲ್ಲೀನವಾಗಿ ಕೆಲಸ‌‌ ಮಾಡುತ್ತವೆ‌. ನಾನು ಚುನಾವಣೆ ಮುಗಿದ ಕೂಡಲೇ ನಿರ್ಗಮನ ಆಗುವುದಿಲ್ಲ. ಮರುದಿನವೇ ಕೆಲಸ ಮಾಡುತ್ತೇನೆ‌. ಈ ಬಾರಿ ಯಾವುದೇ ಸರ್ಕಾರಿ ಹಾಗೂ ಖಾಸಗಿಯಲ್ಲಿ ಶಿಕ್ಷಕರ ನೇಮಕಾತಿಗಳು ನಡೆಯದ ಕಾರಣ ಮತದಾರರ ಸಂಖ್ಯೆ ಕಡಿಮೆಯಾಗಿದೆ.

ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 17,342 ಮತದಾರರು ಇದ್ದು, ಇದರಲ್ಲಿ 15,000 ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವ ಕಾರ್ಯ ನಮ್ಮಿಂದ ಆಗಿದೆ. 1980ನೇ ಇಸ್ವಿಯಿಂದ ಶಿಕ್ಷಕರು ನನ್ನ ಮೇಲೆ ನಂಬಿಕೆಯಿಟ್ಟು ಮತ ಹಾಕಿ ಗೆಲ್ಲಿಸುತ್ತಿದ್ದಾರೆ. ನನಗೆ ತಂದೆಯೂ ಮತ ಹಾಕಿದ್ದಾರೆ, ಮಕ್ಕಳು ಮತ ನೀಡುತ್ತಿದ್ದಾರೆ. ಹೀಗಾಗಿ, ಎರಡು ತಲೆ ಮಾರಿನ ಮತದಾರರು ನನ್ನ ಬೆಂಬಲಕ್ಕೆ ಇದ್ದಾರೆ. ಅವರಿಗೆ ಮೋಸ ಮಾಡುವಂತಹದ್ದು ಇಲ್ಲವೇ ಇಲ್ಲ.

ನಾನು ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಿಲ್ಲಲು ತೀರ್ಮಾನ ಮಾಡಿದ್ದೇನೆ. ನಾನು ಮೊದಲು ಗೆದ್ದು ಬಂದಿದ್ದೆ ಸ್ವತಂತ್ರವಾಗಿ, ಆನಂತರ ಪಕ್ಷಗಳಿಂದ ನಿಂತು ಗೆದ್ದು ಬಂದಿದ್ದೇನೆ‌. ರಾಜಕಾರಣದಲ್ಲಿ ಇರುವ ಕಾರಣ ಒಂದು ಪಕ್ಷದಲ್ಲಿ ಇರಬೇಕು. ಶಿಕ್ಷಕರ ಸಮಸ್ಯೆ ಬಂದಾಗ ಅವುಗಳನ್ನು ಪರಿಹಾರಕ್ಕೆ ಸಪೋರ್ಟ್ ಬೇಕಾಗುತ್ತದೆ ಎಂಬ ಕಾರಣಕ್ಕೆ 1983ರಲ್ಲಿ ಶಿಕ್ಷಕರ ಸಂಘದಿಂದ ಟರಾವ್ ಮಾಡಿದ್ದೇವೆ. ಹಾಗಾಗಿ, ಶಿಕ್ಷಕರ ಪ್ರೀತಿ, ವಿಶ್ವಾಸ ಉಳಿಸುಕೊಂಡು ಹೋಗುವ ಕೆಲಸ ಮಾಡುವೆ ಎಂದರು.

ಇದನ್ನೂ ಓದಿ: ರಸ್ತೆ ಕಾಮಗಾರಿ ಮಾಡಿದ ಮೂರು ದಿನದಲ್ಲೇ ಕಿತ್ತು ಬರುತ್ತಿದೆ ಡಾಂಬರು.. ಜನರ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.