ಧಾರವಾಡ: ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ್ ಸಹಾಯಕ ಚುನಾವಣಾಧಿಕಾರಿ ಗುರುದತ್ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದರು. ಧಾರವಾಡದ ಕೆಸಿಡಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆ ಮೂಲಕ ಆಗಮಿಸಿದ ಬಸವರಾಜ, ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರ ಇರುವುದು ವಿಶ್ವದಾಖಲೆ ಮಾಡಲು ಅಲ್ಲ, ಜನರ ಕಷ್ಟ ಸುಖ ಬಗೆಹರಿಸಲು ಎಂದು ಹೊರಟ್ಟಿಗೆ ಟಾಂಗ್ ನೀಡಿದರು. ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಅವರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಲಾಗುವುದು. ಶಿಕ್ಷಕರು ಪಕ್ಷಾತೀತವಾಗಿ ಇದ್ದಾರೆ. ಹೀಗಾಗಿ, ನಾನು ಕೂಡ ಹಲವಾರು ಬಾರಿ ಅವರ ಸಮಸ್ಯೆಯಲ್ಲಿ ಭಾಗಿಯಾಗಿದ್ದೇನೆ ಎಂದರು.
ಇದನ್ನೂ ಓದಿ: 'ಕೈ' ಬಿಟ್ಟು ಕಪಿಲ್ ಸಿಬಲ್ 'ಸೈಕಲ್' ಬ್ಯಾಲೆನ್ಸ್!