ಹುಬ್ಬಳ್ಳಿ: ಬಸವ ಜಯಂತಿ ಅಂಗವಾಗಿ ಹು-ಧಾ ಸೆಂಟ್ರಲ್ ಕ್ಷೇತ್ರದ ವಾರ್ಡ್ ನಂ. 29 ಮಧುರಾ ಕಾಲೋನಿ, ವಿನಯ್ ಕಾಲೋನಿ, ಪಾಟೀಲ್ ಲೇಔಟ್, ಶ್ರೀಸಿದ್ಧಾರೂಢ ಕಾಲೋನಿಗಳಲ್ಲಿ ಕೊರೊನಾ ವೈರಸ್ ನಿಯಂತ್ರಣ ಕಾರ್ಯ ನಡೆಯಿತು.
![Basava Jayanti celebration by spraying medicine in Hubli](https://etvbharatimages.akamaized.net/etvbharat/prod-images/kn-hbl-06-murusaviramath-basava-jayanati-av-7208089_26042020195350_2604f_1587911030_862.jpg)
ಟ್ರ್ಯಾಕ್ಟರ್ ಪಂಪ್ ಮುಖಾಂತರ ಔಷಧ ಸಿಂಪಡಣೆ ಮಾಡಲಾಯಿತು. ಸಾರ್ವಜನಿಕರು ತಮ್ಮ ಮನೆಯ ಮುಂದೆ ಬಸವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೊರೊನಾ ಮಹಾಮಾರಿ ದೇಶದಿಂದ ತೊಲಗಲಿ ಎಂದು ವಿಶ್ವಗುರು ಶ್ರೀಬಸವೇಶ್ವರರಲ್ಲಿ ಪಾರ್ಥನೆ ಸಲ್ಲಿಸಿದರು.
ಇನ್ನು, ಉತ್ತರ ಕರ್ನಾಟಕದ ಪ್ರತಿಷ್ಠಿತ ಮೂರು ಸಾವಿರ ಮಠದಲ್ಲಿ ಸರಳವಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಿಶ್ವಗುರು ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಿದರು.