ETV Bharat / city

ವಿಧಾನಪರಿಷತ್ ಚುನಾವಣೆ.. ಬಿಜೆಪಿ 15 ಸ್ಥಾನ ಗೆಲ್ಲಲಿದೆ: ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ - ಎಂಎಲ್​ಸಿ ಫಲಿತಾಂಶದ ಬಗ್ಗೆ ಯಡಿಯೂರಪ್ಪ ಹೇಳಿಕೆ

ನಾಳೆ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ನಾವು 15 ಸ್ಥಾನ​ಗಳನ್ನು ಗೆಲ್ಲುತ್ತೇವೆ. ಇದರಿಂದ ವಿಧಾನ ಪರಿಷತ್​ನಲ್ಲಿ ನಮಗೆ ಬಹುಮತ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

author img

By

Published : Dec 13, 2021, 3:04 PM IST

ಹುಬ್ಬಳ್ಳಿ: ನಾಳೆ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ನಾವು 15 ಸ್ಥಾನ​ಗಳನ್ನು ಗೆಲ್ಲುತ್ತೇವೆ. ಇದರಿಂದ ವಿಧಾನ ಪರಿಷತ್​ನಲ್ಲಿ ನಮಗೆ ಬಹುಮತ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು,ವಿಧಾನ ಪರಿಷತ್ ಚುನಾವಣೆ ಬಹುಮತ ಸಾಬೀತು ಆಗುತ್ತದೆ. ಜನ ನಮಗೆ ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸ ಇದೆ. ಬೆಳಗಾವಿ ಅಧಿವೇಶನದಲ್ಲಿ ಹಲವು ತೀರ್ಮಾನಗಳು ಆಗುತ್ತವೆ. ಅಲ್ಲದೇ ಮತಾಂತರ ನಿಷೇಧ ಮಸೂದೆ ಪಾಸ್​ ಆಗುವ ಸಾಧ್ಯತೆ ಇದೆ ಎಂದರು.

ಮತಾಂತರಕ್ಕೆ ಕಾಂಗ್ರೆಸ್ ವಿರೋಧ ಇದ್ದೇ ಇರುತ್ತೆ. ಮತಾಂತರವನ್ನು ನಿಷೇಧ ಮಾಡುವುದು ಕೂಡ ನಮ್ಮ ಅಪೇಕ್ಷೆಯಾಗಿದೆ. ಹಲವು ರಾಜ್ಯಗಳಲ್ಲಿ ಮತಾಂತರ ಕಾಯ್ದೆ ಜಾರಿಯಲ್ಲಿದೆ. ಅಧಿವೇಶನ ಮುಗಿಯುವ 2-3 ದಿನಗಳೊಳಗೆ ಮಸೂದೆ ಪಾಸ್​ ಆಗಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ: ಸರ್ಕಾರಕ್ಕೆ ಗಡುವು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್​

ಬಸವರಾಜ ಬೊಮ್ಮಾಯಿಗೆ ಬಿಜೆಪಿ ನಾಯಕರಿಂದ ಸಹಕಾರ ಸಿಗುತ್ತಿಲ್ಲ ಎನ್ನುವ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅದರಲ್ಲಿ ಸತ್ಯಾಂಶ ಇಲ್ಲ. ಎಲ್ಲ ರೀತಿಯ ಸಹಕಾರ ಸಿಗುತ್ತಿದೆ. ಬಸವರಾಜ್​ ಬೊಮ್ಮಾಯಿ ಸಿಎಂ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.