ಹುಬ್ಬಳ್ಳಿ:ಬಿಆರ್‌ಟಿಎಸ್ ಮಾರ್ಗದಲ್ಲಿ ಸಂಚರಿಸಿ ಕಾನೂನು ಉಲ್ಲಂಘಿಸಿದ್ದೂ ಅಲ್ಲದೆ, ಭದ್ರತಾ ಸಿಬ್ಬಂದಿಗೆ ಆಟೋ ಗುದ್ದಿಸಿ ಪರಾರಿಯಾಗಿದ್ದ ಚಾಲಕನನ್ನು ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಯಾಪುರ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ವೇಗವಾಗಿ ಬಂದ ಎರಡು ಆಟೋಗಳಿಗೆ ಪಕ್ಕದ ಮಾರ್ಗದಲ್ಲಿ ಸಂಚರಿಸುವಂತೆ ಹೇಳಿದ್ದ ಭದ್ರತಾ ಸಿಬ್ಬಂದಿ ಕಲ್ಲಪ್ಪ ಮಡಿವಾಳ ಅವರ ಮೇಲೆ ನುಗ್ಗಿಸಿ ಗಾಯಗೊಳಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆಟೋ ಚಾಲಕ ಮಲ್ಲೇಶ ನಾಯ್ಕರಅನ್ನು ಬಂಧಿಸಿ ಈತನೊಂದಿಗೆ ಬಂದ ಮತ್ತೋರ್ವ ಆಟೋ ಚಾಲಕನಿಗೆ ಕೇವಲ ದಂಡ ವಿಧಿಸಿದ್ದಾರೆ.