ಹುಬ್ಬಳ್ಳಿ: ಬಿಆರ್ಟಿಎಸ್ ಬಸ್ವೊಂದು ಆಟೋಗೆ ಡಿಕ್ಕಿ ಹೊಡೆದ ಘಟನೆ ಕಿಮ್ಸ್ನ ಮುಖ್ಯ ದ್ವಾರದ ಎದುರು ನಡೆದಿದೆ.
ವೇಗವಾಗಿ ಸಂಚರಿಸುತ್ತಿದ್ದ ಬಿಆರ್ಟಿಎಸ್ ಬಸ್ ಬರುವುದನ್ನು ಗಮನಿಸದೆ ಬಂದ ಆಟೋ ಚಾಲಕ, ರಸ್ತೆ ಕ್ರಾಸ್ ಮಾಡಲು ಹೋದ ಪರಿಣಾಮ ಅಪಘಾತ ಸಂಭವಿಸಿ ಆಟೋ ಪಲ್ಟಿಯಾಗಿ ಬಿದ್ದಿದೆ.
ಆದ್ರೆ ಬಸ್ ಚಾಲಕ ಮುಂಜಾಗ್ರತೆಯಿಂದ ಮುಂದೆ ಬರುತ್ತಿದ್ದ ಮತ್ತೊಂದು ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದ್ದಾನೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ದೃಶ್ಯಾವಳಿಗಳು ಬಿಆರ್ಟಿಎಸ್ ಬಸ್ ನಿಲ್ದಾಣದಲ್ಲಿ ಹಾಕಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.