ETV Bharat / city

ನೈರುತ್ಯ ರೈಲ್ವೆಯಿಂದ ಮತ್ತೊಂದು ಸಾಧನೆ: ಮೊದಲ ಬಾರಿಗೆ ರೈಲಿನಲ್ಲಿ 32 ಬಸ್​ಗಳ ಸಾಗಣೆ - Transport of 32 buses by train

ಬೆಂಗಳೂರು ವಿಭಾಗದ ದೊಡ್ಡಬಳ್ಳಾಪುರ ನಿಲ್ದಾಣದಿಂದ ಚಂಡೀಗಢ ನಗರಕ್ಕೆ ಮೊಟ್ಟ ಮೊದಲ ಬಾರಿಗೆ 32 ಬಸ್​ಗಳನ್ನ ರೈಲಿನ ಮೂಲಕ ಸಾಗಿಸಲಾಗಿದ್ದು, ನೈರುತ್ಯ ರೈಲ್ವೆ ಮತ್ತೊಂದು ಸಾಧನೆ ಮಾಡಿದೆ.

ರೈಲು ಮೂಲಕ 32 ಬಸ್​ಗಳ ಸಾಗಾಣೆ
ರೈಲು ಮೂಲಕ 32 ಬಸ್​ಗಳ ಸಾಗಾಣೆ
author img

By

Published : May 19, 2022, 12:57 PM IST

ಹುಬ್ಬಳ್ಳಿ: ದಿನದಿಂದ ದಿನಕ್ಕೆ ನೈರುತ್ಯ ರೈಲ್ವೆ ಅತ್ಯಾಧುನಿಕತೆ, ವಾಣಿಜ್ಯೋದ್ಯಮ‌ ಹಾಗೂ ಕೈಗಾರಿಕಾ ಸ್ನೇಹಿಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಬೆಂಗಳೂರು ವಿಭಾಗದ ದೊಡ್ಡಬಳ್ಳಾಪುರ ನಿಲ್ದಾಣದಿಂದ ಚಂಡೀಗಢ ನಗರಕ್ಕೆ ಮೊಟ್ಟ ಮೊದಲ ಬಾರಿಗೆ 32 ಬಸ್​ಗಳನ್ನ ರೈಲಿನ ಮೂಲಕ ಸಾಗಿಸಲಾಗಿದೆ.

ಹಿಮಾಚಲ ಪ್ರದೇಶ ರಾಜ್ಯ ಸಾರಿಗೆಯಲ್ಲಿ ಈ ಬಸ್​ಗಳನ್ನ ಬಳಸಲಾಗುತ್ತದೆ. ಅಶೋಕ್ ಲೇಲ್ಯಾಂಡ್ ಬಸ್​ಗಳಾಗಿವೆ. 2021-22 ರಲ್ಲಿ ನೈರುತ್ಯ ರೈಲ್ವೆ 238 ರೈಲುಗಳಲ್ಲಿ ಟೊಯೊಟಾ, ಕಿಯಾ ಕಾರುಗಳು, ಸುಜುಕಿ TVS ಸ್ಕೂಟರ್​ಗಳನ್ನ ಭಾರತದ ವಿವಿಧ ಭಾಗಗಳಿಗೆ ಸಾಗಿಸಿತ್ತು.

ರೈಲು ಮೂಲಕ 32 ಬಸ್​ಗಳ ಸಾಗಣೆ

ಹೊಸದಾಗಿ ನಿರ್ಮಿಸಲಾದ ದ್ವಿಚಕ್ರ ಮತ್ತು 4 ಚಕ್ರದ ವಾಹನಗಳ ಸಾರಿಗೆಗೆ ಇತ್ತೀಚೆಗೆ ಅನೇಕ ಕಂಪನಿಗಳು ರೈಲ್ವೆಯನ್ನ ನೆಚ್ಚಿಕೊಂಡಿವೆ. ರೈಲಿನ ಮೂಲಕ ಸಾಗಾಣಿಕೆ ಮಾಡುವುದು ಸುರಕ್ಷಿತ, ಶೀಘ್ರ ಮತ್ತು ಸುಗಮ. ಅಲ್ಲದೇ, ರಸ್ತೆಯಲ್ಲಿ ಸಾಗಾಣಿಕೆ ಮಾಡುವುದಕ್ಕೆ ಹೋಲಿಸಿದ್ರೆ ಇಂಗಾಲದ ಹೊರಸೂಸುವಿಕೆ ಅತಿ ಕಡಿಮೆ. ಇದರಿಂದ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಈಗ ಟೊಯೊಟಾ, ಕಿಯಾ, ಸುಜುಕಿ ಕಂಪನಿಗಳ ಜೊತೆ ಅಶೋಕ್ ಲೇಲ್ಯಾಂಡ್ ವಾಹನಗಳನ್ನು ಸಾಗಿಸುತ್ತಿರುವುದಕ್ಕೆ ನೈರುತ್ಯ ರೈಲ್ವೆ ಇಲಾಖೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಮುಂಬೈ ಷೇರುಪೇಟೆಯಲ್ಲಿ ಕರಡಿ ಕುಣಿತ; ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,155 ಅಂಶ ಕುಸಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.