ಹುಬ್ಬಳ್ಳಿ : ಹರಿಯಾಣ ಮೂಲದ ಕಂಪನಿಯೊಂದು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದಿನದ 24 ಗಂಟೆ ಏರ್ ಟ್ಯಾಕ್ಸಿ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಇತ್ತೀಚೆಗಷ್ಟೇ ಏರ್ ಟ್ಯಾಕ್ಸಿ ಎಂಬ ಸಂಸ್ಥೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲು ಆಸಕ್ತಿ ವ್ಯಕ್ತಪಡಿಸಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಅರ್ಜಿ ಸಲ್ಲಿಸಿತ್ತು.
ಅವಳಿ ಎಂಜಿನ್ ಟೆಕ್ನಾಮ್ P2006T ಲಘು ವಿಮಾನ ನಿಲುಗಡೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(DGCA) ರಾತ್ರಿ ಪಾರ್ಕಿಂಗ್ ಸೌಲಭ್ಯ ಮಂಜೂರು ಮಾಡಿದೆ ಮತ್ತು ಮುಂಬರುವ ದಿನಗಳಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲಿದೆ.
ಆರಂಭದಲ್ಲಿ ನಮ್ಮ ಏರ್ ಟ್ಯಾಕ್ಸಿಗಳು ಹುಬ್ಬಳ್ಳಿ ಮತ್ತು ಬೆಂಗಳೂರಿನ ನಡುವೆ ಸಂಪರ್ಕ ಸಾಧಿಸಲು ಬಳಸಲಾಗುತ್ತದೆ. ಹುಬ್ಬಳ್ಳಿ-ಬೆಂಗಳೂರು ರಿಟರ್ನ್ ಟ್ರಿಪ್‌ಗೆ ಇಬ್ಬರು ಪ್ರಯಾಣಿಕರಿಗೆ ಸುಮಾರು 75,000 ರೂಪಾಯಿ ವೆಚ್ಚವಾಗಲಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೈಂಟ್ ಇನ್ನೋವೇಷನ್ ಸೆಂಟರ್ ಆರಂಭ