ETV Bharat / city

ಹುಬ್ಬಳ್ಳಿಯಲ್ಲಿ ಆಧಾರ್​ ಕೇಂದ್ರದಲ್ಲಿ ಏಜೆಂಟ್‌ರಗಳ ಹಾವಳಿ: ಅಧಿಕಾರಿಗಳಿಗೆ ಕಿರಿ ಕಿರಿ - ಹುಬ್ಬಳ್ಳಿ ಆಧಾರ್ ಸೇವಾ ಕೇಂದ್ರದ ಮುಖ್ಯಸ್ಥ ಪವನ್

ಹುಬ್ಬಳ್ಳಿಯ ಆಧಾರ್​ ಕೇಂದ್ರಕ್ಕೆ ಎಜೆಂಟ್‌ರಗಳ ಹಾವಳಿ ಹೆಚ್ಚಾಗಿದ್ದು, ಜನರನ್ನು ದಾರಿ ತಪ್ಪಿಸಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.

Hubli
ಆಧಾರ ಕೇಂದ್ರಕ್ಕೆ ಎಜೆಂಟ್‌ರಗಳ ಹಾವಳಿ
author img

By

Published : Jul 6, 2021, 2:12 PM IST

ಹುಬ್ಬಳ್ಳಿ: ಆಧಾರ್ ಈಗ ಪ್ರಮುಖವಾದ ದಾಖಲೆಯಾಗಿದೆ. ಇದು ಈಗ ನಮ್ಮ ಸಂಗಾತಿಯಂತೆ ಸದಾ ಇರಲೇಬೇಕಾದ ಪರಿಸ್ಥಿತಿ ಇದೆ. ಯಾಕೆಂದರೆ ಎಲ್ಲದಕ್ಕೂ ಈಗ ಆಧಾರ್ ಸಂಖ್ಯೆ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಹೀಗಾಗಿ, ಸಾರ್ವಜನಿಕರು ಆಧಾರ್ ಕಾರ್ಡ್‌ ಮಾಡಿಸಲು ಮತ್ತು ತಿದ್ದುಪಡಿಗಾಗಿ ಆಧಾರ್​ ಸೇವಾ ಕೇಂದ್ರಕ್ಕೆ ಬರುತ್ತಿರುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಏಜೆಂಟರು ಜನರನ್ನು ದಾರಿ ತಪ್ಪಿಸಿ, ಹಣ ವಸೂಲಿ ಮಾಡುತ್ತಿದ್ದಾರೆ. ‌‌‌

ಆಧಾರ ಕೇಂದ್ರದಲ್ಲಿ ಎಜೆಂಟ್‌ರಗಳ ಹಾವಳಿ

ನಗರದ ಹಳೇ ಕೋರ್ಟ್ ಹಿಂಭಾಗದಲ್ಲಿರುವ ಆಧಾರ್​ ಸೇವಾ ಕೇಂದ್ರಕ್ಕೆ ಬರುವ ಜನರನ್ನೇ ಟಾರ್ಗೆಟ್ ಮಾಡಿ, ಹೆಚ್ಚಿನ ಹಣ ಪಡೆದು ತಪ್ಪು ಮಾಹಿತಿಗಳನ್ನು ನೀಡಿ ಆಧಾರ್ ಕಾರ್ಡ್ ಮಾಡಿಸಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರು ಸಹ ಆದಷ್ಟು ಬೇಗ ಆಧಾರ್​ ಕಾರ್ಡ್ ಆದ್ರೆ ಸಾಕು ಎಂಬ ಆಲೋಚನೆಯಲ್ಲಿ ಹೆಚ್ಚಿನ ಹಣ ಕೊಟ್ಟು ಆಧಾರ್​ ಮಾಡಿಸಿಕೊಳ್ಳುತ್ತಿದ್ದಾರೆ. ಚಿಟುಗುಪ್ಪಿ ಆಸ್ಪತ್ರೆಯ ಆವರಣ, ಜೈನ್ ಕಾಲೇಜು ಪಕ್ಕದಲ್ಲಿರುವ ಕೆಲ ಏಜೆಂಟ್‌ರಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ರೂ ಕೂಡ ಕ್ಯಾರೇ ಎನ್ನುತ್ತಿಲ್ಲವಂತೆ.

ಈ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ ಆಧಾರ್ ಸೇವಾ ಕೇಂದ್ರದ ಮುಖ್ಯಸ್ಥ ಪವನ್, ಹುಬ್ಬಳ್ಳಿಯಲ್ಲಿ ಸರ್ಕಾರದ ಆಧಾರ್ ಕೇಂದ್ರ ಸ್ಥಾಪಿಸಿ ಒಂದೂವರೆ ವರ್ಷವಾಗಿದೆ. ನಮ್ಮ ಗೈಡ್​ಲೆನ್ಸ್​ ಪ್ರಕಾರ ನಾವು ಆಧಾರ್​ ಮಾಡಿಕೊಡುತ್ತೇವೆ. ಆದರೆ, ಸುತ್ತಮುತ್ತಲಿನ ಏಜೆಂಟರ್​ನ್ನು ಜನರು ಹಿಂಬಾಲಿಸಿಕೊಂಡು ಹೋಗುತ್ತಾರೆ. ಅವರ ಬಳಿ ಯಾವುದೇ ದಾಖಲೆ ಇಲ್ಲದೇ 300 ರಿಂದ 400 ರೂ. ಕೊಟ್ಟು ಆಧಾರ್​ ಕಾರ್ಡ್​ ಮಾಡಿಸಿಕೊಳ್ಳುತ್ತಾರೆ. ಈ ಬಗ್ಗೆ ಅನೇಕ ಬಾರಿ ಪೊಲೀಸರಿಗೆ ತಿಳಿಸಿದ್ದೇವೆ. ಆದರೂ ಕೂಡ ಏಜೆಂಟರ ಹಾವಳಿ ತಪ್ಪುತ್ತಿಲ್ಲ ಎಂದರು.

ಇದನ್ನೂ ಓದಿ: ತಾಕತ್ತಿದ್ರೆ ಬಿಎಸ್​ವೈ ಬೆಂಬಲವಿಲ್ಲದೆ ಯತ್ನಾಳ್ ಗೆದ್ದು ತೋರಿಸಲಿ: ಸಿಎಂ ಆಪ್ತ ಶಾಸಕರಿಂದ ಸವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.