ETV Bharat / city

ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಪೊಲೀಸರೆದುರು ಸತ್ಯ ಬಾಯ್ಬಿಟ್ಟ ಹಂತಕರು! - ವಾಸ್ತು ತಜ್ಞ ಚಂದ್ರಶೇಖರ್ ನಿಧನ ಸುದ್ದಿ

ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೆದುರು ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Accused reveal truth of astrologer Chandrashekhar murdered, astrologer Chandrashekhar murdered news, astrologer Chandrashekhar died news, astrologer Chandrashekhar news, ವಾಸ್ತು ತಜ್ಞ ಚಂದ್ರಶೇಖರ್ ಹತ್ಯೆಯ ಸತ್ಯ ಬಿಚ್ಚಿಟ್ಟ ಆರೋಪಿಗಳು, ವಾಸ್ತು ತಜ್ಞ ಚಂದ್ರಶೇಖರ್ ಕೊಲೆ ಸುದ್ದಿ, ವಾಸ್ತು ತಜ್ಞ ಚಂದ್ರಶೇಖರ್ ನಿಧನ ಸುದ್ದಿ, ವಾಸ್ತು ತಜ್ಞ ಚಂದ್ರಶೇಖರ್ ಸುದ್ದಿ,
ಚಂದ್ರಶೇಖರ ಗುರೂಜಿ ಹತ್ಯೆ
author img

By

Published : Jul 7, 2022, 11:43 AM IST

Updated : Jul 7, 2022, 12:58 PM IST

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪೊಲೀಸರು ಫುಲ್ ಡ್ರಿಲ್ ಮಾಡಿದ್ದಾರೆ. ವಿದ್ಯಾನಗರ ಪೊಲೀಸರ ಮುಂದೆ ಆರೋಪಿಗಳಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ದುಮ್ಮವಾಡ ಕೊಲೆಯ ಹಿಂದಿನ ಕಾರಣಗಳನ್ನು ತಿಳಿಸಿದ್ದಾರೆ ಎನ್ನಲಾಗ್ತಿದೆ.

'ನಮ್ಮನ್ನು ಬದುಕುವುದಕ್ಕೂ ಬಿಡುತ್ತಿರಲಿಲ್ಲ': "ನಾವಿಬ್ಬರೂ ಚಂದ್ರಶೇಖರ ಗುರೂಜಿ ಬಳಿಯೇ 10-12 ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. 2016ರಲ್ಲಿ ಕೆಲಸ ಬಿಟ್ಟೆವು. ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು. ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೆವು. ಆದ್ರೆ ನಮ್ಮ ಪ್ರತೀ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು, ನಮ್ಮನ್ನು ಬದುಕುವುದಕ್ಕೂ ಬಿಡುತ್ತಿರಲಿಲ್ಲ. ವ್ಯಾಪಾರ ಮಾಡಲು ಸಹ ನಮ್ಮನ್ನು ಬಿಡಲಿಲ್ಲ. ಅಷ್ಟೊಂದು ಕಿರುಕುಳವನ್ನು ಅವರು ನಮಗೆ ನೀಡುತ್ತಿದ್ದರು. ಮಾನಸಿಕವಾಗಿಯೂ ಬಹಳಷ್ಟು ಕಿರುಕುಳ ನೀಡಿದ್ದಾರೆ. ನಾವು ಎಲ್ಲೇ ಯಾವುದೇ ಬ್ಯುಸಿನೆಸ್‌ ಮಾಡಿದರೂ ನಮಗೆ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಕೈ ಹಾಕುತ್ತಿದ್ದರು. ಒಂದಿಲ್ಲೊಂದು ಸಮಸ್ಯೆ ತಂದಿಡುತ್ತಿದ್ದರು. ಬೇರೆ ಬೇರೆ ಊರುಗಳಲ್ಲಿ ಬ್ಯುಸಿನೆಸ್​ ಮಾಡುತ್ತಿದ್ದರೂ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ. ಹೀಗಾಗಿ ತಾಳ್ಮೆಗೆಟ್ಟು ನಾವು ಕೊಲೆ ಮಾಡಿದ್ದೇವೆ." ಎಂದು ಆರೋಪಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಕ್ತರ ಸೋಗಿನಲ್ಲಿ ಬಂದ್ರು, ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ ಇರಿದ್ರು.. ಚಂದ್ರಶೇಖರ್​ ಗುರೂಜಿ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Last Updated : Jul 7, 2022, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.