ETV Bharat / city

ಹಳ್ಳಿಗರಿಗೆ ಕಲುಷಿತ ನೀರು ಪೂರೈಕೆ: ಸೋಷಿಯಲ್ ಮೀಡಿಯಾದಲ್ಲಿ ಕೆರೆ ವಿಡಿಯೋ ಶೇರ್​​ - Navalgunda Taluk

ಕುಡಿಯುವ ನೀರಿನಲ್ಲಿ ಪಾಚಿಗಟ್ಟಿ ಕಸ-ಕಡ್ಡಿ, ಹುಳುಗಳು ಹರಿದು ಬರುತ್ತಿವೆ. ಈ ಅವ್ಯವಸ್ಥೆಯಿಂದ ರೋಸಿ ಹೋಗಿದ ಕೇಲವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

a messy water supply to villagers: People shots video and upload to internet
ಹಳ್ಳಿಗರಿಗೆ ಕಲುಷಿತ ನೀರು ಪೂರೈಕೆ: ಕೆರೆಯ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟ ಜನತೆ
author img

By

Published : May 23, 2020, 9:55 PM IST

ಹುಬ್ಬಳ್ಳಿ: ಕೋವಿಡ್​​​ನಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆರೆಯಿಂದ ಕಲುಷಿತವಾದ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಆರೋಪ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳದಲ್ಲಿ ಕೇಳಿಬಂದಿದೆ.

ಹಳ್ಳಿಗರಿಗೆ ಕಲುಷಿತ ನೀರು ಪೂರೈಕೆ: ಕೆರೆಯ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟ ಜನತೆ

ಕುಡಿಯುವ ನೀರಿನಲ್ಲಿ ಪಾಚಿಗಟ್ಟಿದ ನೀರು, ಕಸ-ಕಡ್ಡಿ, ಉರಿ ಹುಳುಗಳು ಹರಿದು ಬರುತ್ತಿವೆ. ಮೊದಲೇ ಕೊರೊನಾ ವೈರಸ್​ನಿಂದ ಇಡೀ ಮಾನವ ಕುಲ ನಲುಗಿ ಹೋಗಿದೆ. ಇಂತಹ ಸಂದರ್ಭಗಳಲ್ಲಿ ಈ ರೀತಿಯ ನೀರು ಸರಬರಾಜು ಮಾಡಿದರೆ ಏನಾಗಬಾರದು. ಅಲ್ಲದೆ ಈ ಕೆರೆ ಏರಿಯ ಮೇಲಿನ ಗಲೀಜು ನೋಡಿದರೆ ಎಂತವರಿಗಾದರೂ ಅಚ್ಚರಿಯಾಗುತ್ತದೆ. ಇದು ಮನುಷ್ಯರು ಉಪಯೋಗಿಸುವ ನೀರೋ ಅಥವಾ ಪ್ರಾಣಿಗಳದ್ದೋ ಎಂಬ ಅನುಮಾನ ಕೂಡ ಮೂಡುತ್ತದೆ.

ಈ ಗ್ರಾಮದ ಜನ ಅವ್ಯವಸ್ಥೆಯಿಂದ ರೋಸಿ ಹೋಗಿದ ಕೇಲವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದ್ಯಾವ ಸಂದರ್ಭದಲ್ಲಿ ಈ ಕೆರೆಯಿಂದ ಕುಡಿವ ನೀರು ಪೂರೈಕೆ ಯೋಜನೆಗೆ ಮುಂದಾದರೋ ಗೊತ್ತಿಲ್ಲ. ಗ್ರಾಮಸ್ಥರು ಅಶುದ್ಧ ನೀರು ಕುಡಿಯುವಂತಾಗಿದೆ.

ಗ್ರಾಮಸ್ಥರು ಹಲವಾರು ಬಾರಿ ಮನವಿ ಮಾಡಿದ್ದರು ಅಧಿಕಾರಿಗಳು ಗಮನವನ್ನೇ ಹರಿಸಲಿಲ್ಲ. ಹೀಗಾಗಿ ಕರೆಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕರೆ ಸ್ವಚ್ಚತಾ ಕಾರ್ಯಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.