ಹುಬ್ಬಳ್ಳಿ: ಕೊರೊನಾ ವೈರಸ್ನಿಂದಾಗಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿತ್ತು. ಇಂತಹ ಸಮಯದಲ್ಲಿ ಅದೆಷ್ಟೋ ಜನ ಬೀದಿಗೆ ಬಿದ್ದಿದ್ದಾರೆ. ಅದರಲ್ಲಿಯೇ ಒಂದಿಷ್ಟು ಜನ ಮಾಸ್ಕ್ ಮಾರುತ್ತಾ ಬದುಕು ಕಟ್ಟಿಕೊಂಡಿದ್ದಾರೆ.
ಸಂಕಷ್ಟ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಸರ್ ಮಾರುವ ಮೂಲಕ ಜನ ಬದುಕು ಕಟ್ಟಿಕೊಂಡಿದ್ದಾರೆ. ಹುಬ್ಬಳ್ಳಿಯ ಬಸವರಾಜ ಎಂಬುವರು ಸಹ ತಮ್ಮ ಬೈಕ್ ಅನ್ನೇ ವ್ಯಾಪಾರಿ ಕೇಂದ್ರವಾಗಿ ಬಳಸಿಕೊಂಡು ಮಾಸ್ಕ್ಗಳನ್ನು ಮಾರುವ ಕೆಲಸ ಮಾಡುತ್ತಿದ್ದಾರೆ. ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದ ಇವರು, ಲಾಕ್ಡೌನ್ ಬಳಿಕ ವ್ಯಾಪಾರ ವೃದ್ಧಿಯಾಗದೇ ಇರುವುದನ್ನು ಮನಗಂಡು ಮಾಸ್ಕ್ ಮಾರಲು ನಿರ್ಧರಿಸಿದ್ದರು.
ಲಾಕ್ಡೌನ್ನಿಂದಾಗಿ ಜೀವನ ಸಾಗಿಸಲು ತುಂಬಾ ಕಷ್ಟವಾಗಿತ್ತು. ಆದರೆ ಸುಮಾರು ಮೂರು ತಿಂಗಳಿನಿಂದ ಮಾಸ್ಕ್ ಮಾರಾಟ ಮಾಡುತ್ತಿರುವ ಇವರಿಗೀಗ ವ್ಯಾಪಾರ ಕೈಹಿಡಿದಿದೆ. ಇನ್ನು ಇವರ ಬಳಿ ಎಲ್ಲಾ ವಿದಧ ಮಾಸ್ಕ್ಗಳು ದೊರೆಯುತ್ತಿವೆ.
ಕೊರೊನಾ ಭೀತಿ ಹಿನ್ನೆಲೆ ಪ್ರತಿಯೊಬ್ಬರು ಮಾಸ್ಕ್ಗಳನ್ನು ಉಪಯೋಗಿಸಿ ಎಂದು ಜಾಗೃತಿ ಮೂಡಿಸುವ ಜೊತೆಗೆ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.