ETV Bharat / city

ಹುಬ್ಬಳ್ಳಿ ಉದ್ಯಮಿಗೆ ಮೂರುವರೆ ಕೋಟಿ ವಂಚನೆ : ಹಣ ವಾಪಸ್​ ಕೇಳಿದಕ್ಕೆ ಕೊಲೆ ಬೆದರಿಕೆ!

author img

By

Published : Mar 30, 2022, 2:22 PM IST

ವರ್ಷವಾದರೂ ಪ್ರಾಜೆಕ್ಟ್‌ ನೀಡದಿದ್ದರಿಂದ ಹಣ ಮರಳಿಸುವಂತೆ ಕೇಳಿದ ವಿನೋದ ಅವರಿಗೆ ದೀಪಕ್​ ಎಂಬಾತ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ..

Hubli man three and half crore fraud to businessman, Hubli crime news, murder threat to Hubli Businessman, Hubli news, ಹುಬ್ಬಳ್ಳಿ ಉದ್ಯಮಿಗೆ ಮೂರುವರೆ ಕೋಟಿ ವಂಚನೆ, ಹುಬ್ಬಳ್ಳಿ ಅಪರಾಧ ಸುದ್ದಿ, ಹುಬ್ಬಳ್ಳಿ ಉದ್ಯಮಿಗೆ ಕೊಲೆ ಬೆದರಿಕೆ, ಹುಬ್ಬಳ್ಳಿ ಸುದ್ದಿ,
ಹುಬ್ಬಳ್ಳಿ ಉದ್ಯಮಿಗೆ ಮೂರುವರೆ ಕೋಟಿ ವಂಚನೆ

ಹುಬ್ಬಳ್ಳಿ : ಸಾಫ್ಟ್‌ವೇರ್‌ ಹಾಗೂ ಐಟಿ ಕಂಪನಿಯ ವಿವಿಧ ಪ್ರಾಜೆಕ್ಟ್‌ ನೀಡುವುದಾಗಿ ಸಿಬಿಟಿ ಕಿಲ್ಲಾದ ಉದ್ಯಮಿ ವಿನೋದ ರಾಥೋಡ್ ಅವರಿಂದ 3.50 ಕೋಟಿ ಹಣ ಪಡೆದು ವಂಚಿಸಿದ ನಾಲ್ವರ ವಿರುದ್ಧ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮಿತ್ ಪ್ರಭು, ಅಂಕಿತಾ ಕಾಮತ್‌, ಬೆಂಗಳೂರಿನ ದೀಪಕ್​ ಸುಂದರರಾಜನ್‌ ಮತ್ತು ಹೈದರಾಬಾದ್‌ನ ಶ್ರವಣಕುಮಾರ ಆರೋಪಿಗಳು ಎಂದು ಗುರುತಿಸಲಾಗಿದೆ.

ಓದಿ: ಸಂಘರ್ಷದ ವಾತಾವರಣದಲ್ಲಿಯೂ ಶಾಂತಿ - ಸುವ್ಯವಸ್ಥೆ ಕಾಪಾಡಿದ್ದೇವೆ: ಸಿಎಂ ಬೊಮ್ಮಾಯಿ

ವಿನೋದ ರಾಥೋಡ್‌, ಅಮಿತ್‌ ಪ್ರಭು ಹಾಗೂ ಅಂಕಿತಾ ಕಾಮತ್‌ 2019ರಲ್ಲಿ ಸೆಟ್‌ಲೈಟ್ ಬಿಲ್ಡಿಂಗ್‌ನಲ್ಲಿ ಬಿಎಲ್‌ಹೆಚ್ ಹೈಟೆಕ್ ಪ್ರೈ.ಲಿ. ಆರಂಭಿಸಿದ್ದರು. ಸಿಂಗಾಪುರದಲ್ಲಿ ಪ್ರಾಜೆಕ್ಟ್ ಇದ್ದು, ಅದನ್ನು ಪಡೆಯಲು ಹಣ ಬೇಕಾಗುತ್ತದೆ ಎಂದು ವಿನೋದ್ ಅವರಿಂದ ಅಮಿತ್‌ ಹಾಗೂ ಅಂಕಿತಾ ₹15 ಲಕ್ಷ ಪಡೆದುಕೊಂಡಿದ್ದರು. ಹೀಗೆ ಬೇರೆ-ಬೇರೆ ಪ್ರಾಜೆಕ್ಟ್ ಹೆಸರಿನಲ್ಲಿ 3.50 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.

ವರ್ಷವಾದರೂ ಪ್ರಾಜೆಕ್ಟ್‌ ನೀಡದಿದ್ದರಿಂದ ಹಣ ಮರಳಿಸುವಂತೆ ಕೇಳಿದ ವಿನೋದ ಅವರಿಗೆ ದೀಪಕ್​ ಎಂಬಾತ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.