ETV Bharat / city

ಹುಬ್ಬಳ್ಳಿ; 5 ಗಂಟೆಯ ಬಳಿಕ ಸ್ವಯಂ ಲಾಕ್​​ಡೌನ್​ಗೆ ವ್ಯಾಪಾರಸ್ಥರ ನಿರ್ಧಾರ - Voluntary Lockdown

ಹುಬ್ಬಳ್ಳಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆಯೇ ಜನತೆ ಸ್ವಯಂಪ್ರೇರಿತ ಲಾಕ್​​ಡೌನ್​ ಮಾಡಲು ಮುಂದಾಗಿದ್ದಾರೆ. ಇಲ್ಲಿನ ಗಣೇಶೋತ್ಸವ ಮಂಡಳಿ ವ್ಯಾಪಾರಸ್ಥರು ಸಂಜೆ 5 ಗಂಟೆ ಬಳಿಕ ಅಂಗಡಿ-ಮುಂಗಟ್ಟು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದಾರೆ.

A Ganeshotsav Board decided to self lockdown after 5 pm
5 ಗಂಟೆಯ ಬಳಿಕ ಸ್ವಯಂ ಲಾಕ್​​ಡೌನ್​ಗೆ ಗಣೆಶೋತ್ಸವ ಮಂಡಳಿ ವ್ಯಾಪಾರಸ್ಥರ ನಿರ್ಧಾರ
author img

By

Published : Jul 9, 2020, 10:14 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಎಲ್ಲೆಡೆ ಆತಂಕದ ವಾತಾವರಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಶ್ರೀ ಗಣೇಶೋತ್ಸವ ಮಂಡಳಿ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಸಂಜೆ 5 ಗಂಟೆಗೆ ವ್ಯವಹಾರ ಬಂದ್ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಗಣೇಶೋತ್ಸವ ಮಂಡಳಿಯ ಹಿರೇಪೇಟ, ಭೂಸಪೇಟ, ಕಂಚಾರಗಲ್ಲಿ ಹಾಗೂ ಅಕ್ಕಿಹೊಂಡ ಭಾಗದ ವ್ಯಾಪಾರಸ್ಥರು ಇಂದು ಸಭೆ ಸೇರಿ ಇಂದಿನಿಂದ ಪ್ರತಿದಿನ 5 ಗಂಟೆಗೆ ಎಲ್ಲ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈಜೋಡಿಸಿದ್ದಾರೆ.

5 ಗಂಟೆಯ ಬಳಿಕ ಸ್ವಯಂ ಲಾಕ್​​ಡೌನ್​ಗೆ ಗಣೆಶೋತ್ಸವ ಮಂಡಳಿ ವ್ಯಾಪಾರಸ್ಥರ ನಿರ್ಧಾರ

ಜಿ.ಎಂ. ಚಿಕ್ಕಮಠ, ಬಾಬಣ್ಣ ಬುರಟ್ಟಿ, ಪ್ರಕಾಶ ಜವಳಿ, ಚನ್ನಪ್ಪ ಜಾಬೀನ, ಧರ್ಮರಾಜ ಟಿಕಣ್ಣವರ, ದೀಪಕ ಸವಣೂರ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚನೆ ನೀಡಿದ್ದು, ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.