ETV Bharat / city

ಶಿಕ್ಷಕಿಗೆ ಹೋಂ ವರ್ಕ್ ತೋರಿಸಲು 35 ಕಿ.ಮೀ ಕ್ರಮಿಸಿದ 8 ವರ್ಷದ ಬಾಲಕ - ಹುಬ್ಬಳ್ಳಿ ಲೇಟೆಸ್ಟ್​ ನ್ಯೂಸ್

ಶಿಕ್ಷಕಿಗೆ ನೀಡಿದ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕನೊಬ್ಬ 35 ಕಿ.ಮೀ. ಪ್ರಯಾಣ ಮಾಡಿ ಬಂದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

8-year-old boy  has traveled 35 km to show homework to teacher
ಶಿಕ್ಷಕಿಗೆ ಹೋಂ ವರ್ಕ್ ತೋರಿಸಲು 35 ಕಿ.ಮೀ ಪ್ರಯಾಣಿಸಿ ಬಂದ 8 ವರ್ಷದ ಬಾಲಕ
author img

By

Published : Oct 31, 2020, 12:13 PM IST

Updated : Oct 31, 2020, 6:16 PM IST

ಹುಬ್ಬಳ್ಳಿ: ಆನ್‌ಲೈನ್ ಶಿಕ್ಷಣದ ಬಗ್ಗೆ ಸಾಕಷ್ಟು ಆರೋಪ ಪ್ರತ್ಯಾರೋಪಗಳಿವೆ.‌ ಆನ್​ಲೈನ್ ಶಿಕ್ಷಣ ಕೈಗೆಟುಕದೆ ಕಂಗಾಲಾದ ಬಾಲಕನೊಬ್ಬ ತಾನು ಮಾಡಿದ ಹೋಂ ವರ್ಕ್ ತೋರಿಸಲು 35 ಕಿಲೋ ಮೀಟರ್ ಪ್ರಯಾಣಿಸಿ ಬಂದಿರುವ ಅಚ್ಚರಿಯ ಘಟನೆ ನಡೆದಿದೆ.

ಕುಂದಗೋಳ ತಾಲೂಕಿನ ಯರಿಬುದಿಹಾಳ ಗ್ರಾಮದ 8 ವರ್ಷದ ಪವನ್ ಕಂಠಿ ಎಂಬ ಬಾಲಕನ ತಂದೆ-ತಾಯಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ತಮ್ಮ ಮಗನನ್ನು ಹುಬ್ಬಳ್ಳಿಯ ವಸತಿ ನಿಲಯದಲ್ಲಿಟ್ಟು ವಿದ್ಯಾಭ್ಯಾಸ ನೀಡುತ್ತಿದ್ದರು. ಕೊರೊನಾ ಹಿನ್ನೆಲೆ, ಸದ್ಯ ಶಾಲೆಗಳು ಬಂದ್ ಆಗಿವೆ. ಹೀಗಾಗಿ ಪವನ್ ಕಂಠಿ, ಊರಿಗೆ ತೆರಳಿ ತಾಯಿ-ತಂದೆ ಜೊತೆ ವಾಸವಾಗಿದ್ದ.

ಶಿಕ್ಷಕಿಗೆ ಹೋಂ ವರ್ಕ್ ತೋರಿಸಲು 35 ಕಿ.ಮೀ ಕ್ರಮಿಸಿದ 8 ವರ್ಷದ ಬಾಲಕ

ಕಳೆದ ತಿಂಗಳು ತಾಯಿ ಜೊತೆ ಶಾಲೆಗೆ ಬಂದು ತನ್ನ ಶಿಕ್ಷಕಿಯನ್ನು ಭೇಟಿಯಾಗಿದ್ದ‌. ಆಗ ಶಿಕ್ಷಕಿ ಅನುಸೂಯಾ ಸಜ್ಜನ್, ಒಂದು ತಿಂಗಳಿಗಾಗುವಷ್ಟು ಹೋಂ ವರ್ಕ್​ ನೀಡಿದ್ದರಂತೆ. ಸದ್ಯ ಹೋಂ ವರ್ಕ್ ಮುಗಿಸಿರುವ ಪವನ್, ಅದನ್ನು ಶಿಕ್ಷಕಿಗೆ ತೋರಿಸಲು 35 ಕಿಲೋ ಮೀಟರ್ ಪ್ರಯಾಣಿಸಿ ಹುಬ್ಬಳ್ಳಿಗೆ ಬಂದಿದ್ದಾನೆ.
ಬಾಲಕನ ಶಿಕ್ಷಣದ ಮೇಲಿನ ಆಸಕ್ತಿ ಕಂಡು ಆತನ ಶಿಕ್ಷಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನ್​ಲೈನ್ ಕ್ಲಾಸ್​ಗೆ ಸೌಲಭ್ಯವಿಲ್ಲದ ಕಾರಣ, ಹೋಂ ವರ್ಕ್ ನೀಡಲಾಗಿತ್ತು. ಇದೀಗ ಶಿಕ್ಷಕಿ ಅನುಸೂಯಾ ಸಜ್ಜನ್​ ಮತ್ತೆ ಹೋಂ ವರ್ಕ್ ಜೊತೆಗೆ ನೋಟ್ ಬುಕ್, ಪುಸ್ತಕ ನೀಡಿ ಬಾಲಕನನ್ನು ಕಳುಹಿಸಿ ಕೊಟ್ಟಿದ್ದಾರೆ.

Last Updated : Oct 31, 2020, 6:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.